ಕಾಸರಗೋಡು: ಸಾರ್ವಜನಿಕರು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗೆ ವೀಡಿಯೋ ಕರೆ ಮೂಲಕ ನೇರವಾಗಿ ದೂರು ಸಲ್ಲಿಸಬಹುದಾದ ದೃಷ್ಟಿ ಯೋಜನೆ ಪ್ರಕಾರ ಸಲ್ಲಿಸಿದ್ದ 6 ದೂರುಗಳಿಗೆ ಪರಿಹಾರ ಒದಗಿಸಲಾಗಿದೆ.
ಚಂದೇರ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಕುಡಿತದ ಮತ್ತಿನಲ್ಲಿ ಪತಿ ತನ್ನ ಪತ್ನಿಗೆ ದೈಹಿಕ ಹಿಂಸೆ ನೀಡಿದ ದೂರಿನಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತೆ ಚಂದೇರ ಎಸ್.ಐ.ಗೆ ಆದೇಶ ನೀಡಲಾಗಿದೆ.
ನೀಲೇಶ್ವರ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಹನವೊಂದರ ಮಾರಾಟ ಸಂಬಂಧ ತಲೆದೋರಿದ್ದ ತಗಾದೆಯಂತೆ ತನಿಖೆ ನಡೆಸಿ 2 ದಿನಗಳಲ್ಲಿ ಪರಿಹಾರ ಒದಗಿಸುವಂತೆ ನೀಲೇಶ್ವರ ಎಸ್.ಐ.ಗೆ ದೇಶ ನೀಡಲಾಗಿದೆ.
ಅಂಬಲತ್ತರ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾರಿ ಸಮಸ್ಯೆಯೊಂದಕ್ಕೆ ಸಂಬಂಧಿಸಿ ತಕ್ಷಣ ಈ ಪ್ರದೇಶಕ್ಕೆ ತೆರಳಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಆದೇಶಿಸಲಾಗಿದೆ.
ನೀಲೇಶ್ವರ ಪೋಲೀಸ್ ಠಾಣೆ ಆವರಣದಲ್ಲಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿ, ನಿಲುಗಡೆ ಮಾಡಲಾದ ಅನೇಕ ವಾಹನಗಳನ್ನು ಸ್ಥಳಾಂತರಿಸುವಂತೆ ನಿವೃತ್ತ ಶಿಕ್ಷಕರೊಬ್ಬರು ನೀಡಿದ್ದ ದೂರಿನಲ್ಲಿ ತಕ್ಷಣ ಕ್ರಮ ಕೈಗೊಳ್ಳುವುದಾಗಿ ತಿಳಿಸಲಾಗಿದೆ.
ಪ್ರತಿ ಬುಧವಾರ ಸಂಜೆ 4 ಗಂಟೆಯಿಂದ 5 ಗಂಟೆ ವರೆಗೆ ಸಾರ್ವಜನಿಕರು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗೆ ವಾಟ್ಸ್ ಆಪ್ ನಂಬ್ರ 9497928009 ಕ್ಕೆ ವೀಡಿಯೋ ಕರೆ ಮಾಡಿ ನೇರವಾಗಿ ದೂರು ಸಲ್ಲಿಸಬಹುದು.