ನವದೆಹಲಿ: ದೇಶದೆಲ್ಲೆಡೆ ಸೋಮವಾರ(ಸೆ.6)ದಂದು ಇಂಧನ ದರ ಪರಿಷ್ಕರಿಸಲಾಗಿಲ್ಲ. ಭಾರತದಲ್ಲಿ ಕಳೆದ ಬುಧವಾರ ಹಾಗೂ ಭಾನುವಾರ(ಸೆ.05) ರಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಸರಾಸರಿ 15 ಪೈಸೆಯಷ್ಟು ಇಳಿಕೆ ಮಾಡಲಾಗಿತ್ತು. ಮಿಕ್ಕಂತೆ ಸತತವಾಗಿ ಇಂಧನ ದರದಲ್ಲಿ ಬದಲಾವಣೆಯಾಗಿರಲಿಲ್ಲ.
ಸೆ.5 ರಂದು ಪೆಟ್ರೋಲ್, ಡೀಸೆಲ್ ದರ ಪರಿಷ್ಕರಿಸಲಾಗಿದ್ದು, ಸರಾಸರಿ 19ಪೈಸೆ ಪ್ರತಿ ಲೀಟರ್ ತಗ್ಗಿದೆ ಎಂದು ದೇಶದ ಪ್ರಮುಖ ಮೂರು ತೈಲ ಕಂಪನಿಗಳು ಮಾಹಿತಿ ನೀಡಿದ್ದವು. ತಮಿಳುನಾಡಿನಂತೆ ಪುದುಚೇರಿ ಸರ್ಕಾರ ಕೂಡಾ ಪೆಟ್ರೋಲ್ ಮೇಲಿನ ತೆರಿಗೆ ತಗ್ಗಿಸಿದೆ. ಇದರಿಂದ ಪ್ರತಿ ಲೀಟರ್ ಮೇಲೆ ಸರಾಸರಿ 3 ರು ತಗ್ಗಿತ್ತು. ಇನ್ನಷ್ಟು ಇಳಿಕೆಯಾಗಿದೆ.
ಜಾಗತಿಕವಾಗಿ ಕಚ್ಚಾತೈಲ ಬೆಲೆ ತೀವ್ರ ಏರಿಳಿತ ನಡುವೂ ಇಂಧನ ದರದಲ್ಲಿ ವ್ಯತ್ಯಾಸ ಕಂಡು ಬಂದಿರಲಿಲ್ಲ. ಪ್ರತಿ ಬ್ಯಾರೆಲ್ ಬೆಲೆ 66 ಯುಎಸ್ ಡಾಲರ್‌ಗಿಂತಲೂ ಕಡಿಮೆ ಮೊತ್ತಕ್ಕೂ ಕುಸಿದಿತ್ತು. ಆದರೆ, ಕಳೆದ ಎಂಟು ದಿನಗಳಿಂದ ಚೇತರಿಸಿಕೊಂಡಿದೆ. ತಮಿಳುನಾಡಿನ ಬಜೆಟ್‌ನಲ್ಲಿ ಪೆಟ್ರೋಲ್ ಮೇಲಿನ ರಾಜ್ಯ ತೆರಿಗೆಯನ್ನು ಪ್ರತಿ ಲೀಟರ್ ಮೇಲೆ 3 ರು ತಗ್ಗಿಸಿದ್ದು ಬಿಟ್ಟರೆ, ಉಳಿದೆಡೆ ಇಂಧನ ದರ ಪ್ರತಿ ಲೀಟರ್ ಮೇಲೆ 100 ರು ಬೆಲೆ ಇದ್ದೇ ಇದೆ.
ಉಳಿದಂತೆ, ಉಳಿದ ಎಲ್ಲಾ ರಾಜ್ಯಗಳಲ್ಲಿನ ಸೆಸ್, ವ್ಯಾಟ್ ಅಧಿಕವಾಗಿರುವುದರಿಂದ ಯಾವ ರಾಜ್ಯದಲ್ಲೂ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಮೇಲೆ 100 ರು ಗಿಂತ ತಗ್ಗಿಲ್ಲ.
ಮೇ 4ರಿಂದ ಇಂದಿನ ತನಕ ಪೆಟ್ರೋಲ್ ಒಟ್ಟು 40 ಬಾರಿ ಹಾಗೂ ಡೀಸೆಲ್ 37 ಬಾರಿ ಏರಿಕೆಯಾಗಿತ್ತು. ಮೇ 4ರಿಂದ ಪೆಟ್ರೋಲ್ 11.15 ರು ಪ್ರತಿ ಲೀಟರ್ ಹಾಗೂ ಡೀಸೆಲ್ 10.80 ರು ಪ್ರತಿ ಲೀಟರ್ ಆಗಿದೆ.
ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ರಾಜಸ್ಥಾನ, ಮಧ್ಯಪ್ರದೇಶ, ಕರ್ನಾಟಕ, ಉತ್ತರಪ್ರದೇಶ, ಹರ್ಯಾಣ, ಜಮ್ಮು ಮತ್ತು ಕಾಶ್ಮೀರ, ಒಡಿಶಾ, ಲಡಾಕ್, ಬಿಹಾರ, ಕೇರಳ, ಪಂಜಾಬ್, ಸಿಕ್ಕಿಂ ಹಾಗೂ ನಾಗಾಲ್ಯಾಂಡ್ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ 100 ರು ಪ್ಲಸ್ ದಾಟಿದೆ. ಈ ಪೈಕಿ ಅನೇಕ ರಾಜ್ಯಗಳಲ್ಲಿ ವ್ಯಾಟ್, ಸೆಸ್ ದರ ಅಧಿಕವಾಗಿವೆ.
ದೆಹಲಿಯಲ್ಲಿ ದರ ಸೋಮವಾರದಂದು ಪೆಟ್ರೋಲ್ ಪ್ರತಿ ಲೀಟರ್‌ಗೆ 101.19ರು ಹಾಗೂ ಡೀಸೆಲ್ ಪ್ರತಿ ಲೀಟರ್‌ಗೆ 88.62ರು ಆಗಿದೆ. ದೇಶದ ವಿವಿಧ ನಗರಗಳ ದರ ಪಟ್ಟಿ ವಿವರ ಮುಂದಿದೆ...
ಕಚ್ಚಾತೈಲ ಬೆಲೆ ಹೇಗೆ ನಿರ್ಧರಿತವಾಗುತ್ತದೆ?
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ 06ರಂದು ಈ ಸಮಯಕ್ಕೆ ಕಚ್ಚಾತೈಲ ಬೆಲೆ ಕೊಂಚ ಇಳಿಕೆ ಕಂಡು 71.84ಯುಎಸ್ ಡಾಲರ್(1 USD=73.05ರೂ) ಪ್ರತಿ ಬ್ಯಾರೆಲ್‌ನಷ್ಟಿದೆ. ಕಚ್ಚಾ ತೈಲ ಬೆಲೆ ಫೆಬ್ರವರಿಯಲ್ಲಿ 61.22 ಡಾಲರ್, ಮಾರ್ಚ್ ತಿಂಗಳಲ್ಲಿ 64.73 ಡಾಲರ್, ಏಪ್ರಿಲ್ ತಿಂಗಳಲ್ಲಿ 66 ಡಾಲರ್ ಹಾಗೂ ಮೇ ತಿಂಗಳಲ್ಲಿ ಸರಾಸರಿ 68 ಡಾಲರ್ ನಷ್ಟಿತ್ತು. ಭಾರತ ಸರ್ಕಾರ ಮೂಲ ಬೆಲೆಯ 125% ರಷ್ಟು ತೆರಿಗೆ ವಿಧಿಸುತ್ತದೆ. ಇಂಧನದ ಮೇಲೆ ಅಬಕಾರಿ ಸುಂಕ ಪೆಟ್ರೋಲ್ ಮೇಲೆ 32. 98 ರೂ ಹಾಗೂ ಡೀಸೆಲ್ ಮೇಲೆ 31.80 ರೂ ನಷ್ಟಿದೆ.
ಯಾವ್ಯಾವ ನಗರದಲ್ಲಿ ಎಷ್ಟಿದೆ ಇಂಧನ ಬೆಲೆ
ನವದೆಹಲಿ: ಪೆಟ್ರೋಲ್ 101.19ರೂ- ಡೀಸೆಲ್ 88.62ರೂ
ಕೋಲ್ಕತಾ: ಪೆಟ್ರೋಲ್ 101.62ರೂ- ಡೀಸೆಲ್ 91.71 ರೂ
ಮುಂಬೈ: ಪೆಟ್ರೋಲ್ 107.26ರೂ- ಡೀಸೆಲ್ 96.19ರೂ
ಚೆನ್ನೈ: ಪೆಟ್ರೋಲ್ 98.96ರೂ- ಡೀಸೆಲ್ 93.26ರೂ
ಬೆಂಗಳೂರು: ಪೆಟ್ರೋಲ್ 104.70 ರೂ- ಡೀಸೆಲ್ 94.04ರೂ
ತಿರುವನಂತಪುರಂ: ಪೆಟ್ರೋಲ್ 103.42ರೂ- ಡೀಸೆಲ್ 95.38ರೂ
ಪಾಟ್ನಾ: ಪೆಟ್ರೋಲ್ 104.12ರೂ- ಡೀಸೆಲ್ 94.86ರ ರೂ
ಹೈದರಾಬಾದ್: ಪೆಟ್ರೋಲ್ 105.26 ರೂ- ಡೀಸೆಲ್ 96.69ರೂ
ನೋಯ್ಡಾ: ಪೆಟ್ರೋಲ್ 98.49ರೂ- ಡೀಸೆಲ್ 89.18ರೂ
ಜೈಪುರ: ಪೆಟ್ರೋಲ್ 108.08 ರೂ- ಡೀಸೆಲ್ 97.72ರೂ
(ಮಾಹಿತಿ ಕೃಪೆ: ಗುಡ್ ರಿಟರ್ನ್ಸ್ .ಇನ್)
ಇಂಧನ ಬೆಲೆ 100 ರೂ ಬೆಲೆ ದಾಟಿದ ರಾಜ್ಯಗಳು
ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತೆಲಂಗಾಣ, ರಾಜಸ್ಥಾನ, ಮಧ್ಯಪ್ರದೇಶ, ಕರ್ನಾಟಕ, ಉತ್ತರಪ್ರದೇಶ, ಹರ್ಯಾಣ, ಜಮ್ಮು ಮತ್ತು ಕಾಶ್ಮೀರ, ಒಡಿಶಾ, ಲಡಾಖ್, ಬಿಹಾರ, ಕೇರಳ, ಪಂಜಾಬ್, ಸಿಕ್ಕಿಂ ಹಾಗೂ ನಾಗಾಲ್ಯಾಂಡ್ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ 100 ರೂ ದಾಟಿದೆ. ರಾಜಸ್ಥಾನದಲ್ಲಿ ಡೀಸೆಲ್ ಬೆಲೆ ಕೂಡಾ 100 ರು ಪ್ಲಸ್ ಇದೆ. ಚೆನ್ನೈ, ಗುರುಗ್ರಾಮ, ಚಂಡೀಗಢ, ನೋಯ್ಡಾ ಹಾಗೂ ಲಕ್ನೋದಲ್ಲಿ 100ರುಗಿಂತ ಕೆಳಗಿದೆ.
ಹೆಚ್ಚು ವ್ಯಾಟ್, ಸೆಸ್ ವಿಧಿಸಿರುವ ರಾಜ್ಯಗಳು
ರಾಜಸ್ಥಾನ, ತೆಲಂಗಾಣ, ಮಧ್ಯಪ್ರದೇಶ ಹಾಗೂ ಒಡಿಶಾ ಹೆಚ್ಚು ವ್ಯಾಟ್, ಸೆಸ್ ವಿಧಿಸುತ್ತಿವೆ. ದೇಶದಲ್ಲಿ ಈ ರಾಜ್ಯಗಳಲ್ಲಿ ಇಂಧನ ದರ ದುಬಾರಿಯಾಗಿದೆ. ಅರುಣಾಚಲ ಪ್ರದೇಶ ಹಾಗೂ ಮಿಜೋರಾಂ ರಾಜ್ಯಗಳಲ್ಲಿ ಇಂಧನ ದರದ ಮೇಲೆ ತೆರಿಗೆ ಅತ್ಯಂತ ಕಡಿಮೆ ಇದೆ. ರಾಜಸ್ಥಾನದ ಗಂಗಾನಗರ ಜಿಲ್ಲೆಯಲ್ಲಿ ಪ್ರತಿ ಪೆಟ್ರೋಲ್ ಬೆಲೆ ದೇಶದಲ್ಲೇ ಅತ್ಯಧಿಕ 113.04 ರೂ ನಷ್ಟಿದೆ, ಡೀಸೆಲ್ ಬೆಲೆ 102.27 ರೂ ಆಗಿದೆ. ಅಲ್ಲದೆ ರಾಜಸ್ಥಾನದ ಎಲ್ಲಾ ಪ್ರಮುಖ ಪಟ್ಟಣಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಬೆಲೆ 100 ರೂ ಗಡಿ ದಾಟಿದೆ.