HEALTH TIPS

ಇಂದಿನ ಕಾಲಘಟ್ಟಕ್ಕೆ ಹೊಂದಿಕೆಯಾಗುವಂತೆ ಮನೆಮನೆ ಯಕ್ಷಗಾನ ಪರಿಕಲ್ಪನೆ ಸಮಯೋಚಿತ: ಎಡನೀರು ಶ್ರೀ: ಮನೆಮನೆ ಸಂಚಾರಿ ಯಕ್ಷಗಾನದ 75ನೇ ಸರಣಿಯಲ್ಲಿ ಅಭಿಮತ


             ಬದಿಯಡ್ಕ: ಕಲಾಕ್ಷೇತ್ರದಲ್ಲಿ ಸುಧೀರ್ಘ ಕಾಲ ಸೇವೆಗೈದು ಅಶಕ್ತತೆಯ ಕಾರಣ ಸಂಕಷ್ಟದಲ್ಲಿರುವ ಕಲಾವಿದರನ್ನು ಗುರುತಿಸಿ ನೆರವು ನೀಡುವ ಕೈಂಕರ್ಯಕ್ಕಿಂತ ಮಿಗಿಲಾದ ಕಲಾಸೇವೆ ಬೇರೊಂದಿಲ್ಲ. ಇಂದಿನ ಸಂಕೀರ್ಣ ವ್ಯವಸ್ಥೆಯಲ್ಲಿ ಕಲಾ ಪ್ರೇಮಿಗಳು ಯಕ್ಷಗಾನ ಪ್ರದರ್ಶನಗಳನ್ನು ವೀಕ್ಷಿಸಲು ಅಸಾಧ್ಯವಾದ ಪರಿಸ್ಥಿತಿಯಲ್ಲಿ ಮನೆಮನೆಗಳಿಗೆ ತೆರಳಿ ಪ್ರದರ್ಶನಗಳನ್ನು ನೀಡುತ್ತಿರುವ ಸಂಚಾರಿ ಯಕ್ಷಗಾನ ಪರಿಕಲ್ಪನೆ ಅತ್ಯಂತ ಸಮಯೋಚಿತ ಎಂದು ಶ್ರೀದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ತಿಳಿಸಿದರು.

          ಕರ್ನಾಟಕ ಸರ್ಕಾರದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರದ ಸಹಕಾರದೊಂದಿಗೆ ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕ, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಸಂಘಹಾಗೂ ಗಡಿನಾಡ ಯಕ್ಷಗಾನ ಅಕಾಡೆಮಿ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಮನೆಮನೆಯಲ್ಲಿ ಯಕ್ಷಗಾನ ಸರಣಿಯ ಅಂಗವಾಗಿ ಗುರುವಾರ ಸಂಜೆ ಶ್ರೀಮದ್ ಎಡನೀರು ಮಠದಲ್ಲಿ ನಡೆದ 75ನೇ ಕಾರ್ಯಕ್ರಮದಲ್ಲಿ ದಿವ್ಯ ಉಪಸ್ಥಿತರಿದ್ದು ಶ್ರೀಗಳು ಮಾತನಾಡಿದರು.


           ಯಕ್ಷಗಾನದಂತಹ ನೆಲದ ಸಂಸ್ಕøತಿಯ ಕಲಾ ಪ್ರಕಾರ ನಮ್ಮೊಡನಿರುವಷ್ಟು ಕಾಲ ಸಾಮಾಜಿಕ ಏಕತೆ, ಪರಂಪರೆಯ ಜ್ಞಾನ, ಸುದೃಢ ಸಮಾಜ  ನಿರ್ಮಾಣಕ್ಕೆ ಮೇಲ್ಪಂಕ್ತಿಯಾಗಿರುತ್ತದೆ. ಸಹೃದಯ ಸಮಾಜ ಪರಿಪೋಶಿಸುವ ಆಸಕ್ತಿ, ಪ್ರೋತ್ಸಾಹ ನೀಡಬೇಕು ಎಂದರು.

              ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಸಂಘದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಉಪಸ್ಥಿತರಿದ್ದು ಮಾತನಾಡಿ, ಸಮಷ್ಠಿ ಕಲೆಯಾಗಿ ರೂಪುಗೊಂಡ ಕರ್ನಾಟಕದ ಹೆಮ್ಮೆಯ ಕಲೆಯಾದ ಯಕ್ಷಗಾನದ ಸಮಗ್ರ ಅಭಿವೃದ್ದಿಗೆ ಪತ್ರಕರ್ತರು ಹಿನ್ನೆಲೆಯಲ್ಲಿ ನಿಂತು ಮಾಡುತ್ತಿರುವ ಈ ಕ್ರಾಂತಿ ಶ್ಲಾಘನೀಯವಾದುದು. ಇತರೆಡೆಗಳಿಗೂ ಮಾದರಿಯಾಗುವ ಮನೆಮನೆ ಯಕ್ಷಗಾನ ಅಭಿಯಾನ ಕಲೆ, ಕಲಾವಿದರು, ಕಲಾಪ್ರೇಮಿಗಳ ಪರಸ್ಪರ ಸಹಕಾರದೊಂದಿಗೆ ಮನಮನಗಳಿಗೂ ತಲಪಲಿ ಎಂದು ಹಾರೈಸಿದರು.

        ಎಡನೀರು ಶ್ರೀಗಳ ಪ್ರಥಮ ಚಾತುರ್ಮಾಸ್ಯ ವ್ಯವಸ್ಥಾಪನಾ ಸಮಿತಿಯ ಪ್ರಧಾನ ಕಾರ್ಯದರ್ಶಿ, ಧಾರ್ಮಿಕ ಮುಂದಾಳು ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಕಾಸರಗೋಡು ಸರ್ಕಾರಿ ಕಾಲೇಜಿನ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕ, ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಉಪಸ್ಥಿತರಿದ್ದು ಶುಭಹಾರೈಸಿದರು. 

              ಈ ಸಂದರ್ಭ ಹಿರಿಯ ಕಲಾವದರಾದ ದಾಸನಡ್ಕ ರಾಮ ಕುಲಾಲ್, ಬಾಲಕೃಷ್ಣ ನಾಯ್ಕ್ ಕಾಟುಕುಕ್ಕೆ, ರಾಮ ಜೋಗಿ ಜೋಡುಕಲ್ಲು, ಚೆನ್ನಪ್ಪ ಪುರುಷ ಬೆಳಾಲು, ನಾರಾಯಣ ಪುರುಷ ಸಜಂಕಿಲ ಅವರನ್ನು ಸನ್ಮಾನಿಸಿ ಧನ ಸಹಾಯ ವಿತರಿಸಲಾಯಿತು. ಶ್ರೀಕೃಷ್ಣ ದೇವಕಾನ ಕಲಾವಿದರ ಪರಿಚಯ ಮಾಹಿತಿ ನೀಡಿದರು.

         ಪ್ರೊ.ಎ.ಶ್ರೀನಾಥ್ ಸ್ವಾಗತಿಸಿ, ಪುರುಷೋತ್ತಮ ಪೆರ್ಲ ವಂದಿಸಿದರು. ವೀ.ಜಿ.ಕಾಸರಗೋಡು ನಿರೂಪಿಸಿದರು. ಅಖಿಲೇಶ್ ನಗುಮುಗಂ, ಜಯರಾಮ ಪಾಟಾಳಿ ಪಡುಮಲೆ ಸಹಕರಿಸಿದರು. ಬಳಿಕ ಸಂಚಾರಿ ತಂಡದಿಂದ ಯಕ್ಷಗಾನ ಪ್ರದರ್ಶನ ನಡೆಯಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries