ಕಾಸರಗೋಡು: ದೇಳಿಯ ಖಾಸಗಿ ಶಿಕ್ಷಣಾಲಯವೊಂದರ 8 ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಮಕ್ಕಳ ಹಕ್ಕು ಆಯೋಗ ಕೇಸು ದಾಖಲಿಸಿದೆ.
ಮಾಧ್ಯಮಗಳು ಪ್ರಕಟಿಸಿರುವ ವರದಿಗಳ ಹಿನ್ನೆಲೆಯಲ್ಲಿ ಆಯೋಗದ ಅಧ್ಯಕ್ಷ ಕೆ.ವಿ.ಮನೋಜ್ ಕುಮಾರ್ ಸವಯಂ ಪ್ರೇರಣೆಯಿಂದ ಕೇಸು ದಾಖಲಿಸಿದರು. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ, ಬೇಕಲ ಡಿ.ವೈ.ಎಸ್.ಪಿ., ಮೇಲ್ಪರಂಬ ಪೆÇಲೀಸ್ ಠಾಣೆ ಹೌಸ್ ಅಧಿಕಾರಿ, ಜಿಲ್ಲಾ ಮಕ್ಕಳ ಸಂರಕ್ಷಣೆ ಅಧಿಕಾರಿ ಅವರು ಅ.4ರ ಮುಂಚಿತವಾಗಿ ಈ ಸಂಬಂಧ ವರದಿ ಸಲ್ಲಿಸುವಂತೆ ಆಯೋಗ ಆದೇಶ ನೀಡಿದೆ.