ತಿರುವನಂತಪುರಂ: ಕೋವಿಡ್ ರಕ್ಷಣೆಯಲ್ಲಿ ರಾಜ್ಯ ಸರ್ಕಾರವು ಸಾಧನೆ ದಾಖಲಿಸಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದರು. ಲಸಿಕೆಯ ಮೊದಲ ಡೋಸ್ ನ್ನು ರಾಜ್ಯದ 90 ಪ್ರತಿಶತ ಜನರಿಗೆ ನೀಡಲ|ಆಗಿದೆ. ಮತ್ತು ಐದು ಜಿಲ್ಲೆಗಳಲ್ಲಿ ಇದು 100 ಪ್ರತಿಶತಕ್ಕೆ ಹತ್ತಿರದಲ್ಲಿದೆ ಎಂದು ಆರೋಗ್ಯ ಸಚಿವರು ಹೇಳಿದರು. ಇಲ್ಲಿಯವರೆಗೆ 2,39,67,633 (2.39 ಕೋಟಿ) ಜನರಿಗೆ ಮೊದಲ ಡೋಸ್ ನೀಡಲಾಗಿದೆ. ಜನರು ಲಸಿಕೆ ಹಾಕಲು ಹಿಂಜರಿಯಬಾರದು ಮತ್ತು ಲಸಿಕೆ ಹಾಕದವರಲ್ಲಿ ಅತಿ ಹೆಚ್ಚು ಸಾವುಗಳು ಸಂಭವಿಸುತ್ತವೆ ಎಂದು ಸಚಿವರು ಹೇಳಿದರು.
ಕೋವಿಡ್ ಜಾಗರೂಕತೆಯಲ್ಲಿ ರಾಜಿ ಮಾಡಿಕೊಳ್ಳಬೇಡಿ ಎಂದು ಸಚಿವರು ಜನರನ್ನು ಕೋರಿರುವರು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಜನರು ಪ್ರತಿರೋಧವನ್ನು ಕಾಯ್ದುಕೊಂಡರೆ ಮಾತ್ರ ಈಗಿರುವ ರಿಯಾಯಿತಿಗಳನ್ನು ಮುಂದುವರಿಸಬಹುದು ಎಂದು ಸಚಿವರು ನೆನಪಿಸಿದರು.
ಇದೇ ವೇಳೆ, ಡೆಂಗ್ಯೂ ಜ್ವರದ ಬಗ್ಗೆ ಕೆಲವು ಸುಳ್ಳು ಪ್ರಚಾರ ನಡೆಯುತ್ತಿದೆ ಎಂದು ಸಚಿವರು ಹೇಳಿದರು. ಡೆಂಗ್ಯೂ ಜ್ವರದಲ್ಲಿ ನಾಲ್ಕು ಪ್ರಮುಖ ವಿಧಗಳಿವೆ. ಎರಡನೇ ರೂಪಾಂತರವು ಹೊಸದಾಗಿರಬಹುದು ಎಂದು ಕೆಲವು ಊಹೆಗಳಿವೆ. ಆದಾಗ್ಯೂ, ಇದು ಸರಿಯಲ್ಲ ಮತ್ತು 2017 ರಲ್ಲಿ ಕೇರಳ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಈ ರೂಪಾಂತರ ವರದಿಯಾಗಿದೆ ಎಂದು ಸಚಿವರು ಹೇಳಿದರು. ನಾಲ್ಕು ವಿಧದ ಡೆಂಗ್ಯೂಗಳಲ್ಲಿ ಎರಡನೆಯದು ಅತ್ಯಂತ ಅಪಾಯಕಾರಿ ಎಂದು ಸಚಿವರು ಹೇಳಿದರು.