ಅಹ್ಮದಾಬಾದ್ ನ ಸರ್ದಾರ್ ಧಾಮ್ ಭವನವನ್ನು ಉದ್ಘಾಟಿಸಿ ಮಾತನಾಡಿರುವ ಅವರು, 9/11 ದಿನ ಇದು. ವಿಶ್ವದ ಇತಿಹಾಸದಲ್ಲಿ ಮಾನವೀಯತೆಯ ಮೇಲೆ ನಡೆದ ದಾಳಿ ಎಂದು ಈ ದಿನವನ್ನು ನೆನಪಿಸಿಕೊಳ್ಳಲಾಗುತ್ತದೆ. ಆದರೆ, ಇದೇ ದಿನಾಂಕವು ಮಾನವೀಯ ಮೌಲ್ಯಗಳ ಬಗ್ಗೆಯೂ ನಮಗೆ ಪಾಠ ಕಲಿಸಿದೆ ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 11 ನಮಗೆ ಅತ್ಯಂತ ಮುಖ್ಯವಾದ ದಿನ ಕೂಡ ಹೌದು, ಏಕೆಂದರೆ, 1893ರಲ್ಲಿ ಇದೇ ದಿನ ಸ್ವಾಮಿ ವಿವೇಕಾನಂದ ಅವರು ಚಿಕಾಗೋದಲ್ಲಿ ಐಸಿಹಾಸಿಕ ಭಾಷಣ ಮಾಡಿದ ದಿನವಾಗಿದೆ. ಭಾಷಣದಲ್ಲಿ ವಿವೇಕಾನಂದ ಅವರು ಮಾನವೀಯತೆ ಮೌಲ್ಯಗಳ ಬಗ್ಗೆ ಇಡೀ ವಿಶ್ವಕ್ಕೆ ಪಾಠ ಹೇಳಿದ್ದರು. 9/11 ಭಯೋತ್ಪಾದಕ ದಾಳಿಯಂತಹ ಘಟನೆಗಳಿಗೆ ಈ ಬೋಧನೆಗಳು ಶಾಶ್ವತ ಪರಿಹಾರಗಳನ್ನು ನೀಡುತ್ತವೆ ಎಂದು ಇಡೀ ವಿಶ್ವ ಅರಿತುಕೊಂಡಿದೆ ಎಂದು ತಿಳಿಸಿದ್ದಾರೆ.