ಕಾಸರಗೋಡಿನ ಸಾಂಸ್ಕೃತಿಕ ಕ್ಷೇತ್ರದ ಗರಿಮೆಯಾದ ಯಕ್ಷಗಾನ ಕಲೆಗೆ ಕಾಲಾಕಾಲಕ್ಕೆ ಕೊಡುಗೆ ನೀಡಿದ ಮಹನೀಯರ ದೊಡ್ಡ ದಂಡು ಹೆಮ್ಮೆ ಎನಿಸುವಂತದ್ದು. ಯಕ್ಷಗಾನ ಕಲಾವಿದರಾಗಿ, ಗುರುಗಳಾಗಿ, ಉತ್ತಮ ಸಂಘಟಕರಾಗಿ ಜಯರಾಮ ಪಾಟಾಳಿ ಪಡುಮಲೆ ಪ್ರಸಿದ್ದರಾದವರು. ಮುಖ್ಯವಾಗಿ ಶಾಲಾ ವಿದ್ಯಾರ್ಥಿಗಳಿಗೆ ಯಕ್ಷಗಾನ ನಾಟ್ಯ ತರಬೇತಿಗಳನ್ನು ಕೇರಳದಾತ್ಯಂತ ನೀಡಿ ರಾಜ್ಯಮಟ್ಟದ ಕಲೋತ್ಸವ ವೇದಿಕೆಗಳಲ್ಲಿ ಯಕ್ಷಗಾನಕ್ಕೆ ಸ್ಥಾನ ನೀಡಿದವರಲ್ಲಿ ಇವರೂ ಪ್ರಮುಖರು.
ಕರ್ನಾಟಕ ಜಾನಪದ ಪರಿಷತ್ತು ಪ್ರಶಸ್ತಿ ವಿಜೇತರಾದ ಜಯರಾಮ ಪಾಟಾಳಿಯವರ ಯಕ್ಷೆÆÃಪಾಸನೆಯ ನೋವು-ನಲಿವುಗಳು ಮಹತ್ತರವಾದ ದಾಖಲೀಕರಣ. ಅವರ ಅನುಭವಗಳ ಹಿಂದೆ-ಮುAದೆ ಒಂದು ಹೋರಾಟ, ಸಾಧಿಸುವ ಛಲ ಮತ್ತು ಕಲೆಯನ್ನು ದಾಟಿಸುವ ಧಾವಂತದ ನಡಿಗೆ ಇದೆ. ಬಹುಷಃ ನಾವದನ್ನು ಗುರುತಿಸದೆ ಹೋದರೆ ಸಾಂಸ್ಕೃತಿಕ ನೆಲೆಗಟ್ಟಿಗೆ ನಾವೆಸಗುವ ಅಪಚಾರವೆಂದರೂ ತಪ್ಪಲ್ಲ.
ಈ ನಿಟ್ಟಿನಲ್ಲಿ ಸಮರಸ ಸುದ್ದಿಯ ಸಂವಾದದಲ್ಲಿ ಇಂದವರು ಅತಿಥಿಯಾಗಿದ್ದಾರೆ. ವೀಕ್ಷಿಸಿ, ಸಮರಸದೊಂದಿಗೆ ಹೆಜ್ಜೆಹಾಕಿ. ಮೆಚ್ಚುಗೆ, ನ್ಯೂನತೆಗಳಿದ್ದರೆ ಇಲ್ಲಿ ತಿಳಿಸಿ.
ಸಮರಸ ಸಂವಾದ: ಛಲಬಿಡದೆ ನ್ಯಾಯ ದೊರಕಿಸಲು ಬಣ್ಣಗಳೊಂದಿಗೆ ನಿರತ ನಿರಂತರ ತುಡಿತ:ಅತಿಥಿ: ಜಯರಾಮ ಪಾಟಾಳಿ ಪಡುಮಲೆ
0
ಸೆಪ್ಟೆಂಬರ್ 06, 2021
Tags