ಕಾಸರಗೋಡು: ಮೂಲತ: ದಾವಣಗೆರೆ ಜಿಲ್ಲೆ ನಿವಾಸಿ, ಕಣ್ಣೂರಿನ ಪಯ್ಯನ್ನೂರು ಎರಮಂ ಬ್ಯಾಂಕ್ ಸನಿಹ ವಾಸಿಸುತ್ತಿರುವ ಪರಶುರಾಮ್ ಅವರ ಪತ್ನಿ ಅನ್ನಪೂರ್ಣ(29)ನಾಪತ್ತೆಯಾಗಿದ್ದು, ಪರಶುರಾಮ್ ಅವರು ಕಾಸರಗೋಡಿನಲ್ಲಿ ಪತ್ನಿಯ ಹುಡುಕಾಟದಲ್ಲಿ ನಿರತರಾಗಿದ್ದಾರೆ. ಪರಶುರಾಮ್ ಅವರು ಕಳೆದ ಒಂದು ವರ್ಷದಿಂದ ಎರಮಂನಲ್ಲಿ ಕೆಂಪುಕಲ್ಲು ಕ್ವಾರಿಯಲ್ಲಿ ಯಂತ್ರದ ಚಾಲಕನಾಗಿ ದುಡಿಯುತ್ತಿದ್ದು, ಆ. 11ರಂದು ತಾವು ವಾಸಿಸುತ್ತಿರುವ ಕ್ವಾಟ್ರಸ್‍ನಿಂದ ಪತ್ನಿ ನಾಪತ್ತೆಯಾಗಿರುವ ಬಗ್ಗೆ ಪೆರಿಂಗೋ ಠಾಣೆಗೆ ದೂರು ನೀಡಿದ್ದರೂ, ಪೊಲೀಸರು ಹೆಚ್ಚಿನ ಆಸಕ್ತಿ ತೋರದಿರುವುದರಿಂದ ಪರಶುರಾಮ್ ಖುದ್ದಾಗಿ ಪತ್ನಿಯ ಹುಡುಕಾಟದಲ್ಲಿ ತೊಡಗಿಸಿಕೊಂಡಿದ್ದಾರೆ.
ದಂಪತಿ ಮೂವರು ಮಕ್ಕಳನ್ನು ಹೊಂದಿದ್ದು, ಆ. 11ರಂದು ಕ್ಷುಲ್ಲಕ ಕಾರಣಕ್ಕೆ ಪತಿಯೊಂದಿಗೆ ವಿರಸಗೊಂಡು ಅನ್ನಪೂರ್ಣ ಮನೆಬಿಟ್ಟು ತೆರಳಿದ್ದಾರೆನ್ನಲಾಗಿದೆ. ಪ್ರಸಕ್ತ ಮೂವರು ಮಕ್ಕಳನ್ನು ಮಂಜೇಶ್ವರ ಹೊಸಂಗಡಿಯ ತನ್ನ ಸಂಬಂಧಿಕರ ಮನೆಯಲ್ಲಿ ನಿಲ್ಲಿಸಿ, ಪತ್ನಿಯ ಹುಡುಕಾಟಕ್ಕೆ ಮುಂದಾಗಿರುವ ಮರಶುರಾಮ್ ಮಾಧ್ಯಮದವರೊಂದಿಗೆ ತನ್ನ ಅಳಲು ವ್ಯಕ್ತಪಡಿಸಿದ್ದಾರೆ. ಪತ್ನಿ ಅನ್ನಪೂರ್ಣ ಅವರ ಬಗ್ಗೆ ಮಾಹಿತಿ ಲಭಿಸಿದಲ್ಲಿ(9739514233, 9742082665, 9964542434)ಎಂಬ ಸಂಖ್ಯೆಗೆ ಕರೆಮಾಡುವಂತೆಯೂ ವಿನಂತಿಸಿದ್ದಾರೆ.