ಬದಿಯಡ್ಕ: ಮಿಥುನ್ ರಮೇಶ್ ಫೇನ್ಸ್ ವೆಲ್ಪೇರ್ ಅಸೋಸಿ0iÉುೀಷನ್ ಕಾಸರಗೋಡು ಜಿಲ್ಲಾ ಕಮಿಟಿಯ ನೇತೃತ್ವದಲ್ಲಿ ನಡೆದ "ಆನ್ ಲೈನ್ ಓಣೋಲ್ಸವಂ" ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲಾ ಓಣಂ ಪಾಟ್ ಸ್ಪರ್ಧೆಯಲ್ಲಿ ಉಬ್ರಂಗಳ ವಿದ್ಯಾಲಕ್ಷ್ಮೀ ಮೈಲ್ತೊಟ್ಟಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಮೈಲ್ತೊಟ್ಟಿ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಜ್ಯೂನಿಯರ್ 0iÉುೀಸುದಾಸ್ ಖ್ಯಾತಿಯ ರದೀಶ್ ಕಾಸರಗೋಡು ವಿದ್ಯಾಲಕ್ಷ್ಮೀ ಅವರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಬಹುಮುಖ ಪ್ರತಿಭೆಯ ಕುಮಾರಿ ವಿದ್ಯಾಲಕ್ಷ್ಮೀ ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಶಾಲೆಯಲ್ಲಿ ಪ್ರಸ್ತುತ ಪ್ಲಸ್-ಟು ವಿದ್ಯಾರ್ಥಿನಿ. ಸದಾಶಿವ ಮೈಲ್ತೊಟ್ಟಿ ಮತ್ತು ಗೀತಾ ಇವರ ಮೂವರು ಮಕ್ಕಳಲ್ಲಿ ವಿದ್ಯಾಲಕ್ಸ್ಮಿ ಹಿರಿಯವಳು.