ಕುಂಬಳೆ: ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರ ಜನ್ಮದಿನಾಚರಣೆಯಂಗವಾಗಿ ಕುಂಬಳೆ ಗ್ರಾಮ ಪಂಚಾಯತಿನ ಇಚ್ಲಂಪಾಡಿ ವಾರ್ಡಿನಲ್ಲಿ ಆಯೋಜಿಸಿದ ಕಾರ್ಯಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಯವರಿಗೆ ಭಾರತೀಯ_ಪೆÇೀಸ್ಟ್_ಕಾರ್ಡ್ ಮೂಲಕ ಹುಟ್ಟುಹಬ್ಬದ ಶುಭಾಶಯ ಸಂದೇಶವನ್ನು ಕಳುಹಿಸಲಾಯಿತು.
ಕೋಟೆಕ್ಕಾರಿನ್ನಲ್ಲಿ ನಡೆದ ಕಾರ್ಯಕ್ರಮವನ್ನು ಬಾ.ಜ.ಪ. ಮಂಜೇಶ್ವರ ಮಂಡಲದ ಪ್ರಧಾನ ಕಾರ್ಯದರ್ಶಿ ಮುರಳೀಧರ್ ಯಾದವ್, ಕುಂಬಳೆ ಗ್ರಾ. ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ, ವಾರ್ಡು ಪ್ರತಿನಿಧಿ ಪ್ರೇಮಲತಾ ಯಸ್ ಮತ್ತು ಮಾಜಿ ಪ. ಸದಸ್ಯ ಹರೀಶ್ ಗಟ್ಟಿ ಮತ್ತಿತರರು ಉಪಸ್ಥಿತರಿದ್ದರು.