ಕಾಸರಗೋಡು: ಅಡುಗೆಯಲ್ಲಿ ಬಳಸಿದ ಎಣ್ಣೆಯ ಮರುಬಳಕೆ ಸಂಬಂಧ ಇನ್ನು ಮುಂದೆ ಆತಂಕ ಬೇಕಿಲ್ಲ. ಅಡುಗೆ ಎಣ್ಣೆಯನ್ನು ಬಯೋ ಡೀಸೆಲ್ ಆಗಿ ಪರಿವರ್ತಿಸುವ ರಾಜ್ಯದ ಪ್ರಪ್ರಥಮ ಘಟಕ ಕಾಸರಗೋಡು ಜಿಲ್ಲೆಯಲ್ಲಿ ಸ್ಥಾಪನೆಗೊಳ್ಳಲಿದೆ.
ಕುಂಬಳೆ ಬಳಿಯ ಅನಂತಪುರದ ಉದ್ದಿಮೆ ಉದ್ಯಾನದಲ್ಲಿ ಉದ್ದಿಮೆ ಇಲಾಖೆ ಮಂಜೂರು ಮಾಡಿರುವ ಎರಡು ಎಕ್ರೆ ಜಾಗದಲ್ಲಿ ಪ್ರತಿತಿಂಗಳು 500 ಟನ್ ಬಯೋ ಡೀಸೆಲ್ ಉತರ್ಪಾದಿಸುವ ಸಾಮಥ್ರ್ಯದ ಕಾರ್ಖಾನೆ ನಿರ್ಮಾಣ ಆರಂಭಿಸಲಾಗಿದೆ. ಬ್ರಿಟಿಷ್ ವಂಶಜ ಕಾರ್ಲ್ ವಿಲಿಯಮ್ಸ್ ಫೀಲ್ಡನ್ ಅವರ ಮಾಲೀಕತ್ವದ ನ್ಯೂಟ್ರನ್ ಫ್ಯೂವೆಲ್ಸ್, ಕೋಯಿಕೋಡ್ ನಿವಾಸಿ ಹಕ್ಸರ್ ಆಡಳಿತ ನಿರ್ದೇಶಕರಾಗಿರುವ ಖತಾರ್ ಪ್ರಧಾನ ಕೇಂದ್ರವಾಗಿರುವ ಎರ್ಗೋ ಬಯೋ ಫ್ಯೂವೆಲ್ಸ್ ಪ್ರೈವೇಟ್ ಲಿಮಿಟೆಡ್ ಜಂಟಿ ವತಿಯಿಂದ ಈ ಘಟಕ ಕಾಸರಗೋಡಿನಲ್ಲಿ ಸ್ಥಾಪಿಸಲಾಗುತ್ತಿದೆ.
ಮನೆಗಳಲ್ಲಿ, ಬೇಕರಿಗಳಲ್ಲಿ, ಹೋಟೆಲ್ಗಳಲ್ಲಿ, ರೆಸ್ಟಾರೆಂಟ್ ಗಳಲ್ಲಿ ಇತ್ಯಾದಿ ಕಡೆ ಬಳಸಿದ ಅಡುಗೆ ಎಣ್ಣೆಯಿಂದ ಬಯೋ ಡೀಸೆಲ್ ಉತ್ಪಾದಿಸಲಾಗುವುದು. ದುಬಾಯಿ, ಅಬುದಾಭಿ, ಬಹರೈನ್, ಒಮಾನ್, ಖತಾರ್, ಟೂನೇಷ್ಯಾ, ಮಲೇಷ್ಯಾ ಇತ್ಯಾದಿ ಕಡೆ ಎರ್ಗೋ ಬಯೋ ಡೀಸೆಲ್ ಉತ್ಪಾದಿಸುವ ಕಂಪನಿಯಾಗಿದೆ. ಒಮಾನ್ ನಲಲಿ ಉಭಯ ಸಂಸ್ಥೇಗಳು ಜಂಟಿಯಾಗಿ ಕಾರ್ಯಾಚರಿಸುತ್ತಿವೆ. ಕೇರಳದಲ್ಲಿ ಈ ಸಂಸ್ಥೆಗಳ ಕಂಪನಿ ಆರಂಭಿಸುವ ನಿಟ್ಟಿನಲ್ಲಿ ಸಮೀಪಿಸಿದಾಗ ಉದ್ದಿಮೆ ಸಚಿವ ಪಿ.ರಾಜೀವ್ ಅವರು ಉತ್ತಮ ರೀತಿ ಸ್ಪಂದಿಸಿದ ಪರಿಣಾಮ ಕಾಸರಗೋಡಿನಲ್ಲಿ ಕಾರ್ಖಾನೆ ಆರಂಭಗೊಳ್ಳುತ್ತಿದೆ.
35 ಲಕ್ಷ ಜನಸಂಖ್ಯೆಯಿರುವ ಖತಾರ್ ನಲ್ಲಿ ಪ್ರತಿತಿಂಗಳು 500 ಟನ್ ಬಯೋಡೀಸೆಲ್ ಉತ್ಪಾದಿಸುತ್ತಿರುವ ವೇಳೆ ಅದರ ಎರಡು ಪಟ್ಟು ಜನಸಂಖ್ಯೆಯಿರುವ ಕೇರಳದಲ್ಲಿ ಅವಶೇಷವಾಗಿ ಸಿಗುವ ಅಡುಗೆ ಎಣ್ಣೆ ಸಂಗ್ರಹಿಸಿದರೆ ಈ ಗಣನೆಯ ಹತ್ತು ಪಟ್ಟು ಬಯೋ ಗ್ಯಾಸ್ ಉತ್ಪಾದಿಸಬಹುದು ಎಂದು ಎರ್ಗೋ ಫ್ಯೂವೆಲ್ಸ್ ಸಂಸ್ಥೆಯ ಆಡಳಿತ ನಿರ್ದೇಶಕ ಹಕ್ಸರ್ ಅಭಿಪ್ರಾಯಪಡುತ್ತಾರೆ. ಸದ್ರಿ ಕೇರಳದಲ್ಲಿ ಅಧಿಕೃತವಾಗಿ ಎಣ್ಣೆ ಸಂಗ್ರಹಿಸಿ ಪರಿಷ್ಕರಣೆ ನಡೆಸಿ ಮರುಬಳಕೆಗೆ ಮನೆಗಳಿಗೆ ತಲಪಿಸಲಾಗುತ್ತದೆ. ಸ್ಥಳೀಯ ಮಟ್ಟದಲ್ಲಿ 60ರಿಂದ 70 ರೂ. ಪಡೆದು ತದನಂತರ ಅದಕ್ಕಿಂತ ದುಪ್ಪಟ್ಟು ಬೆಲೆಗೆ ನೂತನ ರೂಪದಲ್ಲಿ, ವಿವಿಧ ಹೆಸರುಗಳಲ್ಲಿ ಸಾರ್ವಜನಿಕ ವಿತರಣೆ ನಡೆಸಲಾಗುತ್ತಿದೆ. ಈ ಎಣ್ಣೆಯ ಮರುಬಳಕೆಯ ಪರಿಣಾಮ ಚರ್ಮರೋಗ, ಕ್ಯಾನ್ಸರ್ ನಂಥಾ ಕಾಯಿಲೆಗಳ ಸಾಧ್ಯತೆ ಅಧಿಕವಾಗಿದೆ. ಇದನ್ನು ಈ ಮೂಲಕ ತಡೆಯುವ ಸಾಧ್ಯತೆಯಿದೆ ಎಂದು ಹಸ್ಕರ್ ತಿಳಿಸುತ್ತಾರೆ.
ಬಯೋ ಡೀಸೆಲ್ ಬಳಸಿ ಎಲ್ಲ ರೀತಿಯ ಡೀಸೆಲ್ ಇಂಜಿನ್ ಗಳ ಚಟುವಟಿಕೆ ಸಾಧ್ಯವಿದೆ ಎಂದು ಕಾರ್ಲ್ ವಿಲ್ಯಮ್ಸ್ ತಿಳಿಸುತ್ತಾರೆ. ಯುರೋಪ್ ದೇಶಗಳಲ್ಲಿ ಬಯೋ ಡೀಸೆಲ್ ವಿಸ್ತೃತವಾಗಿ ಬಳಕೆಯಲ್ಲಿದೆ. ವಾಹನ ಇಂಜಿನ್ ಗಳ ಸಾಮಥ್ರ್ಯ ಹೆಚ್ಚಿಸಲು ಬಯೋ ಡೀಸೆಲ್ ಗೆ ಸಾಧ್ಯವಾಗುತ್ತದೆ ಎಂದು ವೈಜ್ಞಾನಿಕವಾಗಿ ಖಚಿತಗೊಂಡಿದೆಕಡಿಮೆ ಬೆಲೆಯಲ್ಲಿ ಈ ಡೀಸೆಲ್ ಮಾರುಕಟ್ಟೆಯಲ್ಲಿ ಲಭಿಸಲಿದೆ ಎಂದವರು ನುಡಿದರು.
ಫೀಲ್ಡನ್ ಅವರ ನೇತೃತ್ವದ ಕಂಪನಿ ಪ್ರತಿನಿಧಿಗಳು ಅನಂತಪುರಕ್ಕೆ ಆಗಮಿಸಿ ಘಟಕದ ನಿರ್ಮಾಣ ಚಟುವಟಿಕೆಗಳ ಅವಲೋಕನ ನಡೆಸಿದರು. ಡಿಸೆಂಬರ್ ತಿಂಗಳ ವೇಳೆಗೆ ಕಾರ್ಖಾನೆ ಕಾರ್ಯಾರಂಭದ ನಿರೀಕ್ಷೆಯಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ, ತಮಿಳುನಾಡಿನಿಂದಲೂ ಬಳಸಿದ ಅಡುಗೆ ಎಣ್ಣೆ ಸಂಗ್ರಹಿಸಲು ಕಂಪನಿ ಉದ್ದೇಶಿಸಿದೆ. ಕುಟುಂಬಶ್ರೀ ಮತ್ತು ಹರಿತ ಕ್ರಿಯಾ ಸೇನೆಗಳ ಕಾರ್ಯಕರ್ತರನ್ನು ಈ ನಿಟ್ಟಿನಲ್ಲಿ ಬಳಸಲಾಗುವುದು. ಈ ಮೂಲಕ ಅವರಿಗೂ ಕಾರ್ಖಾನೆಯಲ್ಲಿ ನೌಕರಿ ಸಾಧ್ಯತೆಯಿದೆ. ಇಂಡಿಯನ್ ಆಯಿಲ್ ಸಂಸ್ಥೆಯೊಂದಿಗಿನ ಕರಾರಿನಲ್ಲಿ ಅಳವಡಿಸಿ ಬಯೋ ಡೀಸೆಲ್ ಮಾರುಕಟ್ಟೆಗೆ ಬರಲಿದೆ.
ಅನಂತಪುರಕ್ಕೆ ಆಗಮಿಸಿದ್ದ ಕಂಪನಿ ಪ್ರತಿನಿಧಿಗಳು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಅವರನ್ನು ಭೇಟಿ ಮಾಡಿ ಮಾಹಿತಿ ನೀಡಿದ್ದಾರೆ. ಈ ನೂತನ ಉದ್ದಿಮೆಗೆ ಎಲ್ಲ ರೀತಿಯ ಸಹಕಾರ ಒದಗಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು. ಜಿಲ್ಲಾ ಉದ್ದಿಮೆ ಕೇಂದ್ರ ಪ್ರಧಾನ ಪ್ರಬಂಧಕ ಕೆ.ಸಜಿತ್ ಕುಮಾರ್, ಉದ್ದಿಮೆ ಇಲಖೆ ಸಿಬ್ಬಂದಿ ಜೊತೆಗಿದ್ದರು.