ಬೆಂಗಳೂರು: ಡಿಜಿಟಲ್ ವೆಲ್‍ನೆಸ್ ಅಭಿವೃದ್ಧಿ ಪಡಿಸಿರುವ 'ಎಕೋ ಆಯಪ್' ಅನ್ನು ಬೆಂಗಳೂರಿನಲ್ಲಿ ಗುರುವಾರ ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (ಎಡಿಜಿಪಿ) ಭಾಸ್ಕರ್ ರಾವ್ ಹಾಗೂ ಇನ್ನಿತರ ಗಣ್ಯರು ಸೇರಿ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಡಿಜಿಎನ್ ಎಕ್ಸ್‌ಎಚ್‌ಎಲ್‌ಟಿ ಎಲ್‌ಎಲ್‌ಪಿಯ ಸಿಇಒ ಮತ್ತು ಸಹ ಸಂಸ್ಥಾಪಕಿ ಸುಜಾತ ವಿಶ್ವೇಶ್ವರ ಮಾತನಾಡುತ್ತಾ, "ಎಕೋ ಆಯಪ್ ಮನುಷ್ಯನ ಮನಸ್ಥಿತಿ, ಒತ್ತಡ ಮತ್ತು ಆತಂಕದ ಮಟ್ಟವನ್ನು ಅಳೆಯಲು ಮತ್ತು ಆತ್ಮವಿಶ್ವಾಸ, ಕಾರ್ಯಕ್ಷಮತೆ ಹಾಗೂ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಬಹಳ ಸಹಕಾರಿಯಾಗಿದೆ. ಸಂಗೀತ ಚಿಕಿತ್ಸೆಯ ಅನುಭವವನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುವ ಕ್ಷೇಮ ಸಾಧನವಾಗಿದೆ," ಎಂದರು.
ಅಲ್ಲದೇ ಭಾವನಾತ್ಮಕವಾಗಿ ನೆಮ್ಮದಿ ತರಲು ಕಸ್ಟಮೈಸ್ ಮಾಡಿದ ಸಂಗೀತ ಪ್ಲೇ ಪಟ್ಟಿಯನ್ನು ತಯಾರಿಸಲಾಗಿದ್ದು, ಅದರಲ್ಲಿ ತಮಗೆ ಇಷ್ಟವಾಗುವ ಟ್ಯೂನ್‌ಗಳನ್ನು ಆರಿಸಿಕೊಳ್ಳಲು ಸಹ ಅವಕಾಶವಿರುತ್ತದೆ. ಆಯಪ್ ಅನ್ನು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದದಿಂದ ಅಭಿವೃದ್ದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂಗೀತ ಚಿಕಿತ್ಸೆಯಲ್ಲಿ ಮನರಂಜನೆಗಿಂತ ಸಹಾನುಭೂತಿಯ ಬಗ್ಗೆ ಹೆಚ್ಚು ಗಮನ ಹರಿಸಲಾಗಿದೆ. ಇದು ಮನುಷ್ಯನ ನೋವುಗಳನ್ನು ನಿವಾರಿಸಲು ಸಹಕಾರಿಯಾಗಿರುವುದು ಮಾತ್ರವಲ್ಲದೇ, ಮನಸ್ಸನ್ನು ಸರಿಪಡಿಸಲು, ಮನುಷ್ಯನ ಒಳನೋಟಗಳನ್ನು ಸಂಗ್ರಹಿಸಲು, ಒತ್ತಡದ ಮಟ್ಟವನ್ನು, ಆತಂಕವನ್ನು ಕಡಿಮೆಯಾಗಿಸಲೂ ಸಹ ಸಹಾಯ ಮಾಡುತ್ತದೆ. ಸಂಗೀತವು ವಿಜ್ಞಾನವನ್ನು ಮೀರಿದ ಏಕೈಕ ಕಲೆಯಾಗಿದೆ ಎಂದು ಹೇಳಿದರು.
ಮಾತು ಮುಂದುವರೆಸಿದ ಸುಜಾತ ವಿಶ್ವೇಶ್ವರ, "ಅಸಂಖ್ಯಾತ ದತ್ತಾಂಶ ವಿಜ್ಞಾನಿಗಳು, ಎಂಜಿನಿಯರ್‌ಗಳು, ಸಂಗೀತಗಾರರು, ಕಲಾವಿದರು, ಮನಶಾಸ್ತ್ರಜ್ಞರು ಮತ್ತು ವಿಶ್ಲೇಷಕರ ಸಹಾಯದಿಂದ 3 ವರ್ಷದ ಅವಧಿಯಲ್ಲಿ 'ಎಕೋ' ನಿರ್ಮಿಸಲಾಗಿದೆ. 3 ವರ್ಷಗಳ ಅವಧಿಯಲ್ಲಿ ಸರಾಸರಿ 27 ಮಾನವ ಜೀವಿತಾವಧಿಯನ್ನು ಕಳೆದಿದೆ ಎಂದರು.
"ಡಿಜಿಎನ್ ಎಕ್ಸ್‌ಎಚ್‌ಎಲ್‌ಟಿ ಎಲ್‌ಎಲ್‌ಪಿಯಲ್ಲಿ ಒಂದು ದಿನ ಸಮಗ್ರ ಶ್ರವಣಶಾಸ್ತ್ರಕ್ಕೆ ಎಲ್ಲರ ಒಡನಾಡಿಯಾಗುವ ವ್ಯವಸ್ಥೆಯನ್ನು ರೂಪಿಸುವ ನಮ್ಮ ಅನ್ವೇಷಣೆಯು ನಿರಂತರವಾಗಿದೆ. ಕಾಲಾನಂತರದಲ್ಲಿ ಅದನ್ನು ಮತ್ತಷ್ಟು ಹೆಚ್ಚಿಸುವಲ್ಲಿ, ದಿನದಿಂದ ದಿನಕ್ಕೆ ಕ್ಷೇಮವನ್ನು ತಲುಪಿಸುವಲ್ಲಿ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ," ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಯ ಅಮರನ್, ಡಾ. ಹರಿಕೃಷ್ಣ ಮಾರಮ್, ಡಾ. ಶ್ರೀನಿವಾಸ್ ವೇಗಿ, ಡಾ. ಸಿ. ಆರ್. ಸತೀಶ್ ಕುಮಾರ್, ಶ್ರೀಮತಿ ಭಾರತಿ ಪ್ರತಾಪ್ ಹಾಗೂ ಇನ್ನಿತರ ಗಣ್ಯರು ಹಾಜರಿದ್ದರು.
'ಎಕೋ' ಕುರಿತು ಹೆಚ್ಚಿನ ಮಾಹಿತಿಗಾಗಿ ಕೆಳಕಂಡ ವೆಬ್ ಸೈಟ್ ಗೆ ಭೇಟಿ ನೀಡಬಹುದು.
ಮಾಹಿತಿಗಾಗಿ ಸಂಪರ್ಕಿಸಿ ಮೊಬೈಲ್ ಸಂಖ್ಯೆ - 98450 91082