HEALTH TIPS

ಕಾಂಗ್ರೆಸ್ ತೊರೆಯುತ್ತೇನೆ ಆದರೆ ಬಿಜೆಪಿ ಸೇರಲ್ಲ: ಅಮರೀಂದರ್ ಸಿಂಗ್

              ನವದೆಹಲಿಕಾಂಗ್ರೆಸ್ ತೊರೆಯುವುದು ನಿಶ್ಚಿತ ಆದರೆ, ಬಿಜೆಪಿ ಸೇರುವುದಿಲ್ಲ ಎಂದು ಪಂಜಾಬಿನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಗುರುವಾರ ಹೇಳಿದ್ದಾರೆ. ಈವರೆಗೂ ಕಾಂಗ್ರೆಸ್ ನಲ್ಲಿಯೇ ಇದ್ದೇನೆ ಆದರೆ ಕಾಂಗ್ರೆಸ್ ನಲ್ಲಿಯೇ ಉಳಿಯುವುದಿಲ್ಲ, ನನ್ನ ನಿಲುವನ್ನು ಈಗಾಗಲೇ ಸ್ಪಷ್ಟಪಡಿಸಿರುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ನಂತರ ಎನ್ ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಅಮರೀಂದರ್ ಸಿಂಗ್ ಹೇಳಿದ್ದಾರೆ. ಇದಾದ ಬಳಿಕ ತನ್ನ ಟ್ವಿಟರ್ ಖಾತೆಯಿಂದ ಕಾಂಗ್ರೆಸ್ ಪದವನ್ನು ಕಿತ್ತು ಹಾಕಿದ್ದಾರೆ.

            ಪಂಜಾಬ್ ನಲ್ಲಿ ಕಾಂಗ್ರೆಸ್ ಗೆ ಉಳಿಗಾಲವಿಲ್ಲ ಎಂದು ಊಹಿಸಿರುವ ಮಾಜಿ ಮುಖ್ಯಮಂತ್ರಿ, ನವಜೀತ್ ಸಿಂಗ್ ಸಿಧುವನ್ನು ಬಾಲಿಶ: ವ್ಯಕ್ತಿ ಎಂದು ಕರೆದಿದ್ದಾರೆ. 52 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ನನಗೆ ನನ್ನದೇ ಆದ ಸಿದ್ದಾಂತಗಳು, ನಂಬಿಕೆಗಳಿವೆ. ಅದೇ ರೀತಿಯಲ್ಲಿ ನಡೆದುಕೊಂಡಿದ್ದೇನೆ. ಬೆಳಗ್ಗೆ 10-30ರ ಸುಮಾರಿನಲ್ಲಿ ಕಾಂಗ್ರೆಸ್ ಅಧ್ಯಕ್ಷರು ರಾಜೀನಾಮೆ ಕೇಳುತ್ತಾರೆ. ಯಾವುದೇ ಪ್ರಶ್ನೆಗಳನ್ನು ನನ್ನ ಎತ್ತಲಿಲ್ಲ. ಈಗಲೇ ರಾಜೀನಾಮೆ ಕೊಡುವುದಾಗಿ ಹೇಳಿ, 4 ಗಂಟೆಗೆ ರಾಜಭವನಕ್ಕೆ ತೆರಳಿ, ರಾಜ್ಯಪಾಲರಿಗೆ ರಾಜೀನಾಮೆ ನೀಡಿದ್ದೇನೆ. 50 ವರ್ಷಗಳ ನಂತರ ನನ್ನ ಮೇಲೆ ಅಪನಂಬಿಕೆ, ವಿಶ್ವಾಸವಿಲ್ಲದಂತಹ ಪಕ್ಷದಲ್ಲಿ ಯಾವ ಅರ್ಥದಲ್ಲಿ ಇರಲಿ ಎಂದು ಅವರು ಪ್ರಶ್ನಿಸಿದರು.

           ಈ ರೀತಿಯಲ್ಲಿ ನನನ್ನು ನೋಡಿಕೊಳ್ಳಲಾಗುತ್ತದೆ ಎಂಬುದನ್ನು ಊಹಿಸಿರಲಿಲ್ಲ. ಈವರೆಗೂ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ. ಆದರೆ, ನಂಬಿಕೆ ಇಲ್ಲದ ಪಕ್ಷದಲ್ಲಿ ಹೇಗೆ ಮುಂದುವರೆಯಲು ಸಾಧ್ಯ, ಎಲ್ಲಿ ನಂಬಿಕೆ ಇರುವುದಿಲ್ಲವೋ ಅಲ್ಲಿ ಯಾರು ಕೂಡಾ ಮುಂದುವರೆಯಬಾರದು ಎಂದರು. ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುತ್ತೇನೆ. ಇದರಲ್ಲಿ ಎರಡು ಮಾತಿಲ್ಲ, ಆದರೆ, ಬಿಜೆಪಿ ಸೇರುವುದಿಲ್ಲ ಎಂದು ಅವರು ಸ್ಪಷ್ಪಪಡಿಸಿದರು.

            ಸಿಧು ಬಾಲಿಶ: ವ್ಯಕ್ತಿ. ಅವರಿಗೆ ಸ್ಥಿರತೆ ಇಲ್ಲ, ಅವರ ತಂಡದ ಆಟಗಾರರಲ್ಲ, ಅವರು ಏಕಾಂಗಿ. ಅವರು ಕಾಂಗ್ರೆಸ್ ಮುಖ್ಯಸ್ಥರಾಗಿ ನಿರ್ವಹಣೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ಸನ್ನಿವೇಶ ಸೃಷ್ಟಿಸುವುದರಲ್ಲಿ ಅವರು ನಿಸ್ಸೀಮರು, ಕಫಿಲ್ ಶರ್ಮಾ ಶೋನಲ್ಲಿ ಎನು ಮಾಡುತ್ತಾರೋ ಅದನ್ನು ಮಾಡುತ್ತಾರೆ. ಆದರೆ, ಅವರು ಗಂಭೀರ ವ್ಯಕ್ತಿತ್ವ ಹೊಂದಿಲ್ಲ. ಗಂಭೀರತೆ ಇಲ್ಲದ ವ್ಯಕ್ತಿ ಪಕ್ಷ ಹಾಗೂ ರಾಜ್ಯ ಸರ್ಕಾರದಲ್ಲಿ ಉತ್ತಮ ನಿರ್ಣಯ ಕೈಗೊಳ್ಳಲು ಸಾಧ್ಯ ಎಂದು ಪ್ರಶ್ನಿಸಿದರು.

ರಾಹುಲ್ ಗಾಂಧಿ ಪಕ್ಷಕ್ಕೆ ಯುವಕರು ಸೆಳೆಯುಲು ಬಯಸುತ್ತಿದ್ದಾರೆ. ಆದರೆ, ಹಿರಿಯ ಮುಖಂಡರ ಸಲಹೆಗಳನ್ನು ಅವರು ಪರಿಗಣಿಸುತ್ತಿಲ್ಲ ಎಂದು ಕ್ಯಾಪ್ಟನ್ ಅಮರೀಂದರ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಂಜಾಬ್ ನಲ್ಲಿ ನೆಲಕಚ್ಚಲಿದೆ ಎಂದು ಅವರು ಊಹಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries