HEALTH TIPS

ಕೊರೋನಾ ವೈರಾಣು ರೂಪಾಂತರಿಗಳು ಗಾಳಿಯಲ್ಲಿ ಹರಡುವುದಕ್ಕೆ ಉತ್ತಮವಾಗಿ ವಿಕಸನಗೊಳ್ಳುತ್ತಿದೆ: ಅಧ್ಯಯನ ವರದಿ

Top Post Ad

Click to join Samarasasudhi Official Whatsapp Group

Qries

       ವಾಷಿಂಗ್ ಟನ್: ಆಲ್ಫಾ, ಡೆಲ್ಟಾ, ಮ್ಯುಗಳಂತಹ ರೂಪಾಂತರಿಗಳು ರೋಗನಿರೋಧಕ ಶಕ್ತಿಯನ್ನೂ ಮೀರಿ ದೇಹದಲ್ಲಿ ಸಕ್ರಿಯವಾಗಿರುತ್ತವೆ ಎಂಬುದು ಈಗಾಗಲೇ ಬಹಿರಂಗಗೊಂಡಿರುವ ಅಂಶ. ಹೊಸ ವಿಷಯವೇನೆಂದರೆ ಕೊರೋನಾದ ರೂಪಾಂತರಿಗಳು ಗಾಳಿಯಲ್ಲಿ ಹರಡುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ. 

        SARS-CoV-2 ನ ರೂಪಾಂತರಿಗಳು ಗಾಳಿಯಲ್ಲಿ ಉತ್ತಮವಾಗಿ ಹರಡುವ ಸಾಮರ್ಥ್ಯವನ್ನು ಹೊಂದುತ್ತಿವೆ ಆದ್ದರಿಂದ ಲಸಿಕೆ ಪಡೆಯುವುದರ ಜೊತೆಗೆ ಬಿಗಿಯಾಗಿ ಮಾಸ್ಕ್ ಧರಿಸುವುದು, ತಾಜಾ ಗಾಳಿ ಬರುವಂತಹ ವಾತಾವರಣ ನಿರ್ಮಾಣ ಮಾಡಿಕೊಳ್ಳುವುದು ವೈರಾಣು ಸೋಂಕಿನಿಂದ ಕಾಪಾಡಿಕೊಳ್ಳುವುದಕ್ಕೆ ಇರುವ ಮಾರ್ಗಗಳಾಗಿವೆ ಎಂದು ಅಮೆರಿಕದ ಯೂನಿವರ್ಸಿಟಿ ಆಫ್ ಮೇರಿಲ್ಯಾಂಡ್ ನಲ್ಲಿ ನಡೆದ ಅಧ್ಯಯನದಲ್ಲಿ ಹೇಳಲಾಗಿದೆ.

       ಕೋವಿಡ್-19 ಸೋಂಕಿಗೆ ಒಳಗಾದವರು ಉಸಿರಾಡುವ ಗಾಳಿಯಲ್ಲಿ ವೈರಾಣುಗಳಿರುತ್ತವೆ ಹಾಗೂ ಅದೇ ಬೇರೆಯವರಿಗೆ ಗಾಳಿಯ ಮೂಲಕ ಹರಡುವ ಸಾಧ್ಯತೆಗಳಿವೆ. ಉಳಿದ ಸೋಂಕಿತರ ಉಸಿರಿನಿಂದ ಗಾಳಿಯಲ್ಲಿ ಹರಡುವ ವೈರಾಣು ಸಂಖ್ಯೆಗಿಂತಲೂ ಆಲ್ಫಾ ರೂಪಾಂತರಿಯ ವೈರಾಣು ಸೋಂಕು ತಗುಲಿರುವವರ ಉಸಿರಾಟದಲ್ಲಿ 43-100 ಪಟ್ಟು ಹೆಚ್ಚು ವೈರಾಣುಗಳು ಗಾಳಿಯ ಮೂಲಕ ಹರಡುತ್ತವೆ ಎನ್ನುತ್ತಿದೆ ಅಧ್ಯಯನ ವರದಿ.

      ಈ ಅಧ್ಯಯನ ವರದಿ ಜರ್ನಲ್ ಕ್ಲಿನಿಕಲ್ ಇನ್ಫೆಕ್ಷಿಯಸ್ ಡಿಸೀಸ್ ನಲ್ಲಿ ಪ್ರಕಟಗೊಂಡಿದ್ದು, "ಬಿಗಿಯಾದ ಬಟ್ಟೆ ಅಥವಾ ಸರ್ಜಿಕಲ್ ಮಾಸ್ಕ್ ಧರಿಸುವುದರಿಂದ ಸೋಂಕಿತರ ಮೂಲಕ ವೈರಾಣು ಗಾಳಿಯಲ್ಲಿ ಹರಡುವುದನ್ನು ಅರ್ಧದಷ್ಟು ತಪ್ಪಿಸಬಹುದಾಗಿದೆ" ಎಂದು ಮೇರಿಲ್ಯಾಂಡ್ ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನ ವಿಭಾಗದ ಪ್ರೊಫೆಸರ್ ಡಾನ್ ಮಿಲ್ಟನ್ ಹೇಳಿದ್ದಾರೆ.

      ಡೆಲ್ಟಾ ರೂಪಾಂತರಿ ಆಲ್ಫಾ ರೂಪಾಂತರಿಗಿಂತಲೂ ಹೆಚ್ಚು ಸಾ೦ಕ್ರಾಮಿಕವಾಗಿದೆ. ಮೂಗಿನ ಸ್ವ್ಯಾಬ್ ಮತ್ತು ಲಾಲಾರಸದ ಮೂಲಕ ಹರಡುವುದಕ್ಕಿಂತ ಗಾಳಿಯಲ್ಲಿ ಹರಡುವ ಆಲ್ಫಾ ರೂಪಾಂತರಿ ವೈರಾಣುಗಳು 18 ಪಟ್ಟು ಹೆಚ್ಚಾಗಿರುತ್ತದೆ ಎಂದು ಅಧ್ಯಯನ ವರದಿ ಎಚ್ಚರಿಸಿದೆ.

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries