ಕುಂಬಳೆ: ಡಾ. ಅಬ್ದುಲ್ ಸತ್ತಾರ್ ಬರೆದ "ಬೆಳಗಿನ ನೋಟಗಳು" ಎಂಬ ಪುಸ್ತಕ ವಿಮರ್ಶೆ ಕಾರ್ಯಕ್ರಮ ಚೇರಂಗೈಯ ಅವರ ಮನೆಯ ಅಂಗಳದಲ್ಲಿ ಚೌಕಿ ಸಂದೇಶ ಗ್ರಂಥಾಲಯದ ಆಶ್ರಯದಲ್ಲಿ ಇತ್ತೀಚೆಗೆ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಕಾಸರಗೋಡು ತಾಲೂಕು ಗ್ರಂಥಾಲಯ ಪರಿಷತ್ತಿನ ಕಾರ್ಯದರ್ಶಿ ಪಿ ದಾಮೋದರನ್ ವಹಿಸಿದ್ದರು. ರಾಜಾರಾಮ್ ಉದ್ಘಾಟಿಸಿದರು. ಡಾ.ಅಬ್ದುಲ್ ಸತ್ತಾರ್ ಅವರ ಬೆಳಗಿನ ನೋಟಗಳ ಪ್ರಬಂಧಗಳ ಸಂಗ್ರಹವು ನಮ್ಮ ಸುತ್ತಲಿನ ಸದ್ಗುಣಗಳನ್ನು ನಮ್ಮ ಹೃದಯದಲ್ಲಿ ಸೆರೆಹಿಡಿಯುವ ಸಕಾರಾತ್ಮಕ ಆಲೋಚನೆಗಳನ್ನು ಹೊರಸೂಸುವ ಅನುಭವಗಳಿಂದ ಸಮೃದ್ಧವಾಗಿದೆ ಎಂದು ಕೃತಿ ವಿಮರ್ಶಿಸಿ ಬಿಕೆ ಸುಕುಮಾರನ್ ಈ ಸಂದರ್ಭ ತಿಳಿಸಿದರು.
ಟಿಎ ಶಾಫಿ, ವೇಣು ಕಣ್ಣನ್, ಬಾಲಕೃಷ್ಣನ್ ಚೆರ್ಕಳ, ಎಂಪಿ ಜಿಲ್ ಜಿಲ್, ಸದಾನಂದನ್ ಮಾಸ್ತರ್, ಕೆವಿ ಮುಕುಂದನ್ ಮಾಸ್ತರ್, ಪಿಎ ಮುಹಮ್ಮದ್ ಕುಂಞÂ್ಞ ಮಾಸ್ತರ್, ಎಂ ಎ ನಜೀಬ್, ಇಕ್ಬಾಲ್ ಬೇಬಿ, ಮಾಧವನ್, ಬಶೀರ್ ಚೇರಂಗೈ, ಕೆಬಿ ಅಬೂಬಕರ್, ಎಂ ಎ ನಜೀಬ್, ಮೂಸ ಬಾಸಿತ್, ಅರಿಯಾಲ್ ಮುಹಮ್ಮದ್ ಕುಂಞÂ್ಞ, ಅಹ್ಮದ್ ಚೇರಂಗೈ, ಅಬ್ದುಲ್ಲಾ ಸುಲೈಮಾನ್, ರಹೀಮ್ ಚೂರಿ, ಜಬೀರ್ ಕುನ್ನಿಲ್, ಡಾ. ಅಹ್ಮದ್ ಜವಾದ್, ಸಲೀಂ, ಹನೀಫ್ ಚೇರಂಗೈ, ಬಬಿತಾ ವೇಣು, ಶರೀಫ್, ಎಎ ಶಾಫಿ ಸಿದ್ದಕಟ್ಟೆ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು. ಸಾಹಿತ್ಯ ವೇದಿಕೆಯ ಕಾರ್ಯದರ್ಶಿ ಅಶ್ರಫಲಿ ಚೇರಂಗೈ ಸ್ವಾಗತಿಸಿ, ಸಂದೇಶ ಗ್ರಂಥಾಲಯದ ಕಾರ್ಯದರ್ಶಿ ಎಸ್.ಎಚ್.ಹಮೀದ್ ವಂದಿಸಿದರು.