ತಿರುವನಂತಪುರಂ: ರಾಜ್ಯದಿಂದ ಹೊರಗೆ ತೆರಳುವ ಬಗೆಗಿನ ನಿರ್ಬಂಧವನ್ನು ತೆಗೆದುಹಾಕಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಆದಾಗ್ಯೂ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಅನ್ವಯಿಸುವುದಿಲ್ಲ. ಲಸಿಕೆ ಪ್ರಮಾಣಪತ್ರ, ಆರ್‍ಟಿಪಿಸಿಆರ್ ಮತ್ತು ಸೋಂಕು ಮುಕ್ತ ಪ್ರಮಾಣಪತ್ರ ಇನ್ನು ಅಗತ್ಯವಿಲ್ಲ. ನಿನ್ನೆ ನಡೆದ ಕೊರೋನಾ ಪರಿಶೀಲನಾ ಸಭೆಯಲ್ಲಿ ಮತ್ತಷ್ಟು ರಿಯಾಯಿತಿಗಳನ್ನು ನೀಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಜನರಿಗೆ ಹೋಟೆಲ್ ಗಳಲ್ಲಿ ಕುಳಿತು ತಿನ್ನಲು ಅವಕಾಶ ನೀಡಲಾಗಿದೆ. ಹೋಟೆಲ್ ಗಳು ಮತ್ತು ರೆಸ್ಟೋರೆಂಟ್‍ಗಳಲ್ಲಿ ಊಟವನ್ನು ಷರತ್ತುಗಳೊಂದಿಗೆ ಅನುಮತಿಸಬಹುದು. ಎರಡು ಡೋಸ್ ಲಸಿಕೆ ತೆಗೆದುಕೊಂಡವರು ಬಾರ್ ಮತ್ತು ರೆಸ್ಟೋರೆಂಟ್‍ಗಳನ್ನು ಪ್ರವೇಶಿಸಬಹುದು. ಬಾರ್ ಗಳಲ್ಲಿ ಕುಳಿತು ಊಟ ಮಾಡಲು ಇನ್ನು ಮುಂದೆ ಅಡ್ಡಿಯಿಲ್ಲ. ಎಸಿ ಬಳಸಬಾರದು. ಒಟ್ಟು ಆಸನ ವ್ಯವಸ್ಥೆಯ ಅರ್ಧದಷ್ಟು ಆಸನ ಸಾಮಥ್ರ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ. ಜೊತೆಎ ಇಲ್ಲಿ ಕಾರ್ಯನಿರ್ವಹಿಸುವವರು ಎರಡು ಡೋಸ್ ಲಸಿಕೆಯನ್ನು ಪಡೆದಿರಬೇಕು.
ಇದರ ಜೊತೆಗೆ, ಒಳಾಂಗಣ ಕ್ರೀಡಾಂಗಣಗಳು ಮತ್ತು ಈಜುಕೊಳಗಳ ಕಾರ್ಯಾಚರಣೆಗೆ ಅನುಮತಿಸಲಾಗುವುದು. ಲಸಿಕೆ ಹಾಕಿಸಿಕೊಂಡವರನ್ನು ಇಲ್ಲಿಯೂ ಸೇರಿಸಿಕೊಳ್ಳಬೇಕು. ಉದ್ಯೋಗಿಗಳಿಗೆ ಲಸಿಕೆಯ ಎರಡು ಡೋಸ್ ತೆಗೆದುಕೊಳ್ಳಲು ಸೂಚಿಸಲಾಗಿದೆ. ಇದೇ ವೇಳೆ, ಶಾಲೆಯ ಆರಂಭಕ್ಕೆ ಸಂಬಂಧಿಸಿದಂತೆ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ವಿಶೇಷ ಸಮಿತಿಗಳನ್ನು ನೇಮಿಸಲಾಗುವುದು.