ಕಾಸರಗೋಡು: ಕಾಸರಗೋಡು ಜಿಲ್ಲೆಯ ಸರಕಾರಿ ಸಿಬ್ಬಂದಿಯ ಕೊರತೆ ತುರ್ತು ಪರಿಹರಿಸಬೇಕು ಎಂದು ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆ ಆಗ್ರಹಿಸಿದೆ.
ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಅಧ್ಯಕ್ಷತೆ ವಹಿಸಿದ್ದರು.
ಜನಪ್ರತಿನಿಧಿಗಳು ಕೋವಿಡ್ ಪ್ರತಿರೋಧ ಚಟುವಟಿಕೆಗಳಿಗಾಗಿ ಆರೋಗ್ಯ ವಲಯಗಳಿಗೆ ಮಂಜೂರು ಮಾಡಲಾದ ನಿಧಿಯನ್ನು ಪೂರ್ಣರೂಪದಲ್ಲಿ ಬಳಸದೇ ಇರುವುದರ ಬಗ್ಗೆ ಜಿಲ್ಲೆಯ ಶಾಸಕರು ಸಭೆಯಲ್ಲಿ ಧ್ವನಿ ಎತ್ತಿದರು. ಈ ಸಂಬಂದ ಅವಲೋಕನ ನಡೆಸಲು ಸೆ.16ರಂದು ಸಭೆ ಸೇರುವುದಾಗಿ ತೀರ್ಮಾನಿಸಲಾಗಿದೆ.
ಶಾಸಕರ ನಿಧಿ ಬಳಸಿ ನಡೆಸಬೇಕಿರುವ ನಿರ್ಮಾಣ ಚಟುವಟಿಕೆಗಳನ್ನು ಯಥಾಸಮಯ ಪೂರ್ಣಗೊಳಿಸದೇ ಇರುವ ಕರಾರುದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ತಪಾಸನೆ ನಡೆಸುವಂತೆ ಸಿಬ್ಬಂದಿಗೆ ಆದೇಶ ನೀಡಲಾಗಿದೆ. ಪುಟ್ಟ ಯೋಜನೆಗಳನ್ನೂ ವಿಳಂಬ ಮಾಡುವುದು ಅಂಗೀಕರಿಸುವ ವಿಚಾರವಲ್ಲ. ಇಂಥಾ ಮಂದಿಯನ್ನು ಕಪ್ಪುಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗುವುದು ಮತ್ತು ವಹಿಸಿಕೊಂಡ ಚಟುವಟಿಕೆ ಪೂರ್ಣಗೊಳಿಸುವ ಮುನ್ನವೇ ಇತರ ಚಟುವಟಿಕೆಗಳನ್ನು ಅವರಿಗೆ ವಹಿಸಕೂಡದು ಎಂದು ಶಾಸಕರು ತಿಳಿಸಿದರು.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಅಳವಡಿಸಿ ಮುಳಿಯಾರಿನ ಎಂಡೋಸಲ್ಫಾನ್ ಪುನರ್ವಸತಿ ಗ್ರಾಮಕ್ಕಾಗಿ 4.98 ಕೋಟಿ ರೂ. ಮೂಲಭಂಡವಾಳಕ್ಕೆ ಆಡಳಿತೆ ಮಂಜೂರಾತಿ ಲಭಿಸಿದೆ. ಯು.ಎಲ್.ಸಿ.ಸಿ. ಸಂಸ್ಥೆ ನಿರ್ಮಾಣದ ಹೊಣೆ ವಹಿಸಿಕೊಂಡಿದೆ. ಇರ್ಮಾಣ ಚಟುವಟಿಕೆ ಶೀಘ್ರದಲ್ಲಿ ಆರಂಭಿಸಬೇಕಿದೆ. ನಿರ್ಮಾಣ ಪ್ರಗತಿ ಜಿಲ್ಲಾ ಸಮಾಜ ನೀತಿ ಅಧಿಕಾರಿಗೆ ಆಗ್ರಹಿಸಲಾಗಿದೆ ಎಂದು ವಿಶೇಷ ಅಧಿಕಾರಿ ಸಭೆಯಲ್ಲಿ ತಿಳಿಸಿದರು. ವಿವಿಧ ವಿಚಾರಗಳಲ್ಲಿ ಚರ್ಚಿಸಲಾಯಿತು.