ಕಾಸರಗೋಡು: ಸ್ವಾತಂತ್ರ್ಯೋತ್ಸವದ 75ನೇ ವಾರ್ಷಿಕ ಸಂಭ್ರಮಾಚರಣೆ ಅಂಗವಾಗಿ ಕಾಸರಗೋಡು ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ಫಿಟ್ ಇಂಡಿಂiÀiನ್ಫ್ರೀಡಂ ರನ್ ಆಯೋಜಿಸಲಾಯಿತು. ವರ್ಷಪೂರ್ತಿ ನಡೆಯಲಿರುವ 'ಆಜಾದಿ ಕಾ ಅಮೃತ್ ಮಹೋತ್ಸವ್'ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ನೆಹರೂ ಯುವಕೇಂದ್ರ ಫೀಲ್ಡ್‍ಔಟ್ ಈಚ್ ಬ್ಯೂರೋ ಮೂಲಕ ಜಿಲ್ಲೆಯ ವಿವಿಧ ಕ್ಲಬ್‍ಗಳ ಸಹಕಾರದೊಂದಿಗೆ ಸಾಮೂಹಿಕ ಓಟ ನಡೆಯಿತು. ಕೋಟಕುನ್ನು ಕಾಸ್ಕ್ ಕ್ಲಬ್ ಮೂಲಕ ನಡೆದ ಜಿಲ್ಲಾಮಟ್ಟದ ಕಾರ್ಯಕ್ರಮವನ್ನು ಸಂಸದ ಪಿ. ರಾಜ್‍ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಆಲಂಪಾಡಿ ಅಟ್ಲಸ್ ಸ್ಟಾರ್ ಕ್ಲಬ್ ವಠಾರದಿಂದ ಆರಂಭಗೊಂಡ ಸಾಮೂಹಿಕ ಓಟಕ್ಕೆ ಶಾಸಕ ಎನ್.ಎ ನೆಲ್ಲಿಕುನ್ನು ಹಸಿರುನಿಶಾನಿ ತೋರಿಸಿ ಚಾಲನೆ ನೀಡಿದರು. ನೆಹರೂ ಯುವಕೇಂದ್ರ ಜಿಲ್ಲಾ ಯೂತ್ ಕೋರ್ಡಿನೇಟರ್ ಅಭಯಶಂಕರ್, ಫೀಲ್ಡ್ ಪಬ್ಲಿಸಿಟಿ ಅಧಿಕಾರಿ ಬಿಜು ಮ್ಯಾಥ್ಯೂ, ವಿವಿಧ ಕ್ಲಬ್ ಪದಾಧಿಕಾರಿಗಳು ಉಪಸ್ಥಿತರಿದ್ದರು.