ತಿರುವನಂತಪುರಂ: ಶಾಲಾರಂಭದ ಮಾರ್ಗದರ್ಶಿಗಳು ಐದು ದಿನಗಳ ಒಳಗೆ ಅಂತಿಮಗೊಳಿಸಲಾಗುವುದೆಂದು ಶಿಕ್ಷಣ ಸಚಿವ ವಿ.ಶಿವಂಕುಟ್ಟಿ ಹೇಳಿದರು. ತರಗತಿಗಳು ಪ್ರಾರಂಭವಾಗುವ ಮೊದಲು ಪಿಟಿಎ ಸಭೆ ಕರೆಯಲಾಗುವುದೆಂದೂ ಎಂದು ಶಿಕ್ಷಣ ಸಚಿವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಶಾಲೆಯಲ್ಲಿ ಶಿಫ್ಟ್ ವ್ಯವಸ್ಥೆಯನ್ನು ಪರಿಚಯಿಸಲಾಗುವುದು. ವಾರದಲ್ಲಿ ಮೂರು ದಿನ ಬ್ಯಾಚ್ ಗಳಲ್ಲಿ ತರಗತಿ ಆರಂಭಿಸುವ ಯೋಜನೆ ಇದೆ. ತರಗತಿಯಲ್ಲಿ ಪ್ರತಿ ಬೆಂಚ್ ಗಳಲ್ಲಿ ಇಬ್ಬರು ಮಕ್ಕಳು ಮಾತ್ರ ಕುಳಿತುಕೊಳ್ಳಬಹುದು. ಮಕ್ಕಳ ದೇಹದ ಉಷ್ಣತೆ ಪರೀಕ್ಷಾ ವ್ಯವಸ್ಥೆಯನ್ನು ಸ್ಥಾಪಿಸಲಾಗುವುದು.
ಶಾಲೆಯಲ್ಲಿ ಆಮ್ಲಜನಕದ ಮಟ್ಟವನ್ನು ಪರೀಕ್ಷಿಸುವ ವ್ಯವಸ್ಥೆಯೂ ಇರುತ್ತದೆ. ಕೈ ತೊಳೆಯಲು ಪ್ರತಿ ತರಗತಿ ಬಾಗಿಲಲ್ಲಿ ಸೋಪ್ ಮತ್ತು ನೀರು ಇರುತ್ತದೆ. ವಿದ್ಯಾರ್ಥಿಗಳು ಗುಂಪುಗೂಡಲು ಅನುಮತಿಸಲಾಗುವುದಿಲ್ಲ. ಮಧ್ಯಾಹ್ನದ ಊಟ ಇರುವುದಿಲ್ಲ. ಇದರ ಬದಲು ಭತ್ಯೆ ನೀಡಲು ಯೋಜಿಸಲಾಗುತ್ತಿದೆ ಎಂದು ಶಿಕ್ಷಣ ಸಚಿವರು ಹೇಳಿರುವರು.
ಶಾಲೆಯ ಮುಂಭಾಗದಲ್ಲಿರುವ ಅಂಗಡಿಗಳಿಂದ ಆಹಾರ- ಸಿಹಿತಿಂಡಿ ಖರೀದಿಸುವುದನ್ನು ನಿಯಂತ್ರಿಸಲಾಗುತ್ತದೆ. ಮಕ್ಕಳಿಗೆ ಸಮವಸ್ತ್ರ ಕಡ್ಡಾಯವಲ್ಲ. ಇದರ ಜೊತೆಗೆ, ಆನ್‌ಲೈನ್‌ನಲ್ಲಿ ಪೋಷಕರಿಗೆ ಜಾಗೃತಿ ತರಗತಿ ನಡೆಸಲಾಗುವುದು. ತರಗತಿಯನ್ನು ವಿಭಜಿಸಿದಾಗ, ತರಗತಿಯ ಉಸ್ತುವಾರಿ ಶಿಕ್ಷಕರು ವಿದ್ಯಾರ್ಥಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸುವ ವ್ಯವಸ್ಥೆ ಇರುತ್ತದೆ ಎಂದು ಸಚಿವರು ತಿಳಿಸಿರುವರು.