ಕುಂಬಳೆ: ಮುಜುಂಗಾವು ಶ್ರೀ ಪಾರ್ಥಸಾರಥಿ ಕೃಷ್ಣ ದೇವ ಯಕ್ಷಗಾನ ಸಂಘ ಆಚೆಗೋಳಿ, ಕುಂಬಳೆ ಇದರ ಆಶ್ರಯದಲ್ಲಿ 27ನೇ ವರ್ಷದ ಶ್ರೀಕೃಷ್ಣಜನ್ಮಾಷ್ಟಮಿ ವಿಜೃಂಭಣೆಯಿಂದ ಜರಗಿತು.
ಸಂಘದ ಕಲಾವಿದರು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಸುಧನ್ವ ಮೋಕ್ಷ ಎಂಬ ವಿಶೇಷ ತಾಳಮದ್ದಳೆ ಕಾರ್ಯಕ್ರಮಕ್ಕೆ ಮೆರಗು ನೀಡಿತು. ಭಾಗವತರಾಗಿ ಲಕ್ಷ್ಮೀಶ ಬೇಂಗ್ರೋಡಿ, ಹಿಮ್ಮೇಳದಲ್ಲಿ ಕೃಷ್ಣಮೂರ್ತಿ ಪಾಡಿ, ಅನಿಕೇತ ಸುಬ್ರಾಯ ಭಟ್ಟ ಪಾತ್ರವರ್ಗದಲ್ಲಿ ಉದಯಶಂಕರ ಭಟ್ಟ ಮಜಲು, ಸದಾಶಿವ ಗಟ್ಟಿ ನಾಯ್ಕಾಪು, ಶಿವಾನಂದ ಕುಂಬಳೆ, ನಿವೃತ್ತ ಸಿಆರ್‍ಪಿಎಫ್ ಜವಾನ ಪ್ರದೀಪ್ ಉಚ್ಚಿಲ್, ಸದಾಶಿವ ಮುಳಿಯಡ್ಕ, ಶ್ರೀಧರ ಗಟ್ಟಿ ಮುಳಿಯಡ್ಕ, ಕು. ಅನಘಾ ಲಕ್ಷ್ಮೀ, ಕು. ಮನ್ವಿತ್ ಕೃಷ್ಣ ಹಾಗೂ ಗುರುಮೂರ್ತಿ ನಾಯ್ಕಾಪು ಸಹಕರಿಸಿದರು. ಸಂಘದ ಅಧ್ಯಕ್ಷ ಅನಂತ ಗಟ್ಟಿ ಸ್ವಾಗತಿಸಿ ಕಾರ್ಯದರ್ಶಿ ಸುಬ್ರಾಯ ಗಟ್ಟಿ ವಂದಿಸಿದರು. ಮಹೇಶ್ ಭಟ್ಟ ಕಾನ ಮೂಡಕರೆ ನಿರೂಪಿಸಿದರು.