ನವದೆಹಲಿ: ಗ್ರಾಹಕರ ವೇದಿಕೆಯಲ್ಲಿ ಗ್ರಾಹಕರ ಪರವಾಗಿ ಎರಡನೇ ವ್ಯಕ್ತಿಗಳು ದೂರು ನೀಡಲಾಗದು, ತಮಗೆ ಆಗಿರುವ ತೊಂದರೆಯ ಕುರಿತಾಗಿ ಖುದ್ದು ಗ್ರಾಹಕರೇ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಗರ್ಭಿಣಿಯೋರ್ವರಿಗೆ ಸರಿಯಾದ ಚಿಕಿತ್ಸೆ ನೀಡಿಲ್ಲ ಎಂದು ಗರ್ಭಿಣಿಯ ಸಂಬಂಧಿಕರೊಬ್ಬರು ಗ್ರಾಹಕರ ವೇದಿಕೆಗೆ ದೂರು ನೀಡಿದ್ದರು. ಆದರೆ ಗ್ರಾಹಕರ ವೇದಿಕೆಯಲ್ಲಿ ಅವರ ದೂರು ಅರ್ಜಿ ತಿರಸ್ಕೃತಗೊಂಡಿತ್ತು. ಅರ್ಜಿ ತಿರಸ್ಕೃತಗೊಂಡಿದ್ದನ್ನು ಪ್ರಶ್ನಿಸಿ ದೂರುದಾರ ವ್ಯಕ್ತಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ದೂರುದಾರ ವ್ಯಕ್ತಿ ತಮ್ಮದು ಜಾಯಿಂಟ್ ಹಿಂದೂ ಕುಟುಂಬವಾಗಿದ್ದು, ತಾವು ಕುಟುಂಬದ ಮುಖ್ಯಸ್ಥ ಎಂದು ಹೇಳಿಕೊಂಡಿದ್ದರು. ದೂರುದಾರ ವ್ಯಕ್ತಿ ದೂರು ನೀಡಲ್ಪಟ್ಟಿರುವ ಆಸ್ಪತ್ರೆಯಿಂದ ಯಾವುದೇ ಸೇವೆಯನ್ನು ಪಡೆದುಕೊಳ್ಳದೇ ಇರುವುದರಿಂದ ಅವರು ದೂರು ನೀಡಲು ಆಗುವುದಿಲ್ಲ ಎಂಡು ಕೋರ್ಟ್ ತಿಳಿಸಿದೆ.