ಬದಿಯಡ್ಕ: ಕನ್ನೆಪ್ಪಾಡಿಯ ಆಶ್ರಯ ವೃದ್ಧಾಶ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 71 ನೇ ಜನ್ಮದಿನ ಪ್ರಯುಕ್ತ ಆಶ್ರಮ ವಾಸಿಗಳಿಗೆ ವಸ್ತ್ರದಾನ ಮತ್ತು ಅನ್ನದಾನ ಕಾರ್ಯಕ್ರಮ ನಡೆಯಿತು.
ಪ್ರಧಾನಿ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿದ ಬಳಿಕ ಪ್ರಧಾನಿಯಾಗಿ ರಾಜಕೀಯ ಜೀವನದ ಭಾಗವಾಗಿ ಕೇರಳ ರಾಜ್ಯದಾದ್ಯಂತ 20 ದಿನಗಳ ಕಾರ್ಯಕ್ರಮ ನಡೆಸುತ್ತಿದ್ದು ಆಶ್ರಮ ವಾಸಿಗಳ ಜತೆಯಲ್ಲಿ ಮೋದಿಯವರ ಹುಟ್ಟು ಹಬ್ಬವನ್ನು ಆಚರಿಸುತ್ತಿರುವ ಬಗ್ಗೆ ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಸಂತಸ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರ ನೇತೃತ್ವದಲ್ಲಿ ರಾಜ್ಯ ಕಾರ್ಯದರ್ಶಿ ಪಿ.ರಘುನಾಥ್, ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್, ನೇತಾರರಾದ ಪ್ರಮೀಳಾ ಸಿ.ನಾೈಕ್, ಸುಧಾಮ ಗೋಸಾಡ, ಅಶ್ವಿನಿ ಭಟ್, ಸುಕುಮಾರ ಕುದ್ರೆಪ್ಪಾಡಿ, ಕಾಸರಗೋಡು ನಗರಸಭಾ ಸದಸ್ಯೆ ಸವಿತಾ ಟೀಚರ್, ಸದಸ್ಯ ಪಿ.ರಮೇಶ್, ಕೆ.ಎನ್.ಕೃಷ್ಣ ಭಟ್, ಸುನಿಲ್, ಬಾಲಕೃಷ್ಣ ಮೊದಲಾದವರು ನೇತೃತ್ವ ವಹಿಸಿದರು.
ಆಶ್ರಮದ ಗೋವುಗಳಿಗೆ ಗೋಗ್ರಾಸ ನೀಡಿ ಬಳಿಕ ವೃದ್ಧರಿಗೆ ಬಟ್ಟೆ ಬರೆ ಹಾಗು ಭೋಜನ ವಿತರಿಸಲಾಯಿತು. ಆಶ್ರಯ ಕೇಂದ್ರದ ಪರವಾಗಿ ಕಾರ್ಯದರ್ಶಿ ಶಿವಶಂಕರ್ ಮಾಸ್ತರ್, ಜಯದೇವ ಖಂಡಿಗೆ ಅವರು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಮತ್ತು ಕಾರ್ಯದರ್ಶಿ ಪಿ.ರಘುನಾಥ್ ಅವರಿಗೆ ಶಾಲು ಹೊದಿಸಿ ಗೌರವಿಸಿದರು. ರಾಜೇಶ್ ಮಾಸ್ತರ್, ಸುರೇಶ್ ಯಾದವ್, ಕೆ.ಜಗದೀಶ್ ಕೂಡ್ಲು, ಆಶಾ ಜಗದೀಶ್ ಕೂಡ್ಲು ಮೊದಲಾದವರು ಉಪಸ್ಥಿತರಿದ್ದರು. ಗಣೇಶ್ ಭಟ್ ಅಳಕ್ಕೆ ನೀರ್ಚಾಲು ಸ್ವಾಗತಿಸಿದರು.