HEALTH TIPS

ತರಬೇತಿಯಲ್ಲಿ ಅರ್ಥಶಾಸ್ತ್ರ ಭಗವದ್ಗೀತೆ; ರಕ್ಷಣಾ ನಿರ್ವಹಣಾ ಕಾಲೇಜು ಶಿಫಾರಸು

            ನವದೆಹಲಿ: ಕೌಟಿಲ್ಯನ ಅರ್ಥಶಾಸ್ತ್ರ ಮತ್ತು ಭಗವದ್ಗೀತೆಯಂಥ ಭಾರತದ ಪ್ರಾಚೀನ ಕೃತಿಗಳ 'ಪ್ರಸ್ತುತ ಬೋಧನೆಗಳನ್ನು' ಮಿಲಿಟರಿ ತರಬೇತಿಯ ಪಠ್ಯದಲ್ಲಿ ಸೂಕ್ತವಾಗಿ ಅಳವಡಿಸಿಕೊಳ್ಳುವಂತೆ ರಕ್ಷಣಾ ನಿರ್ವಹಣಾ ಕಾಲೇಜ್ (ಸಿಡಿಎಂ) ಇತ್ತೀಚೆಗೆ ನಡೆಸಿದ ಅಧ್ಯಯನವೊಂದು ಶಿಫಾರಸು ಮಾಡಿದೆ. ಈ ಸಾಧ್ಯತೆಯ ಬಗ್ಗೆ ಸಂಶೋಧನೆ ನಡೆಸಲು 'ಭಾರತೀಯ ಸಂಸ್ಕೃತಿ ಅಧ್ಯಯನ ವೇದಿಕೆ' ಸ್ಥಾಪಿಸುವಂತೆ ಹಾಗೂ ಸಮರ್ಪಿತ ಬೋಧಕ ಸಿಬ್ಬಂದಿ ನೇಮಿಸುವಂತೆಯೂ ಅದು ಸಲಹೆ ಮಾಡಿದೆ.

            'ಪ್ರಾಚೀನ ಭಾರತೀಯ ಸಂಸ್ಕೃತಿ ಮತ್ತು ಸಮರಕಲೆ ತಂತ್ರಗಳ ಲಕ್ಷಣಗಳು ಮತ್ತು ಪ್ರಸ್ತುತ ವ್ಯೂಹಾತ್ಮಕ ಚಿಂತನೆ ಹಾಗೂ ತರಬೇತಿಯಲ್ಲಿ ಅವುಗಳ ಸೇರ್ಪಡೆ' ಎಂಬ ಯೋಜನೆಯನ್ನು ಹೆಡ್​ಕ್ವಾರ್ಟರ್ ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್ ಪ್ರಾಯೋಜಿಸಿತ್ತು. ಇದರ ಭಾಗವಾಗಿ ಅಧ್ಯಯನ ನಡೆದಿತ್ತು.

ಸಶಸ್ತ್ರ ಪಡೆಗಳಲ್ಲಿ ವ್ಯೂಹಾತ್ಮಕ ಚಿಂತನೆ ಮತ್ತು ನಾಯಕತ್ವದ ಬೆಳವಣಿಗೆಯ ಸಂದರ್ಭದಲ್ಲಿ ಭಾರತದ ಆಯ್ದ ಪ್ರಾಚೀನ ಕೃತಿಗಳಿಂದ ಸೂಕ್ತ ಅಂಶಗಳನ್ನು ಹೆಕ್ಕಿ ತೆಗೆಯುವುದು ಇದರ ಉದ್ದೇಶವಾಗಿದೆ. ಸಮಕಾಲೀನ ಸಂದರ್ಭದಲ್ಲಿ ಪ್ರಸ್ತುತವೆನಿಸುವ ಅವುಗಳನ್ನು ಉತ್ತಮ ಅಭ್ಯಾಸ ಹಾಗೂ ಚಿಂತನೆಯಲ್ಲಿ ಅಳವಡಿಸಿಕೊಳ್ಳಲು ನೀಲಿ ನಕ್ಷೆ ರೂಪಿಸುವುದು ಯೋಜನೆಯ ಗುರಿಯಾಗಿದೆ. ರಾಜ್ಯಾಡಳಿತ, ಮಿಲಿಟರಿ ರಾಜತಾಂತ್ರಿಕತೆ ಮುಂತಾದ ಕ್ಷೇತ್ರಗಳಲ್ಲಿ ಅವುಗಳನ್ನು ಅಳವಡಿಸಬಹುದಾಗಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ. 

          ಸಿಕಂದರಾಬಾದ್​ನಲ್ಲಿರುವ ಸಿಡಿಎಂ, ಮೂರೂ ಸೇನಾ ಪಡೆಗಳಿಗೆ ತರಬೇತಿ ನೀಡುವ ಪ್ರಮುಖ ಸಂಸ್ಥೆಯಾಗಿದೆ.

              ಸಿಡಿಎಂ ಒತ್ತು: ಸಿಡಿಎಂ ನಡೆಸಿರುವ ಅಧ್ಯಯನ ಅರ್ಥಶಾಸ್ತ್ರ, ಭಗವದ್ಗೀತೆ, ತಿರುಕ್ಕುರಳ್ ಕೃತಿಗಳ ಮೇಲೆ ಗಮನ ಕೇಂದ್ರೀಕರಿಸಿದೆ. ಅವುಗಳಲ್ಲಿರುವ ಸಮರ ಚಿಂತನೆಗಳು, ನಾಯಕತ್ವ, ಅಧಿಕಾರ ನಡೆಸುವ ಕಲೆ ಮತ್ತು ಯುದ್ಧ ಕಲೆಗಳು ಆಧುನಿಕ ಸಂದರ್ಭದಲ್ಲಿ ಗಮನಿಸುವುದು ಅಗತ್ಯ ಎಂದಿದೆ.

ಭಾರತೀಯಕರಣ: 'ಭಾರತೀಯ ಮಿಲಿಟರಿಯನ್ನು ಹೆಚ್ಚು ಭಾರತೀಯಕರಣ' ಗೊಳಿಸುವುದಕ್ಕೆ ಸರ್ಕಾರ ಇತ್ತೀಚಿನ ತಿಂಗಳಲ್ಲಿ ಅಧಿಕ ಒತ್ತು ನೀಡುತ್ತಿದೆ. ಮಾರ್ಚ್​ನಲ್ಲಿ ಗುಜರಾತ್​ನ ಕೆವಾಡಿಯಾದಲ್ಲಿ ನಡೆದ ಕಮಾಂಡರ್​ಗಳ ಸಮ್ಮೇಳನದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಭದ್ರತಾ ವ್ಯವಸ್ಥೆಯನ್ನು ಹೆಚ್ಚು ದೇಶೀಕರಣಗೊಳಿಸುವುದು ಅಗತ್ಯ ಎಂದು ಕರೆ ನೀಡಿದ್ದರು. ಮಿಲಿಟರಿ ಸಾಧನಗಳ ಖರೀದಿ ಮಾತ್ರವಲ್ಲದೆ ಸಶಸ್ತ್ರ ಪಡೆಗಳ ಸಿದ್ಧಾಂತ ಮತ್ತು ಆಚರಣೆಯಲ್ಲಿ ಕೂಡ ಅದು ಪ್ರತಿಬಿಂಬಿತವಾಗಬೇಕು ಎಂದಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries