ತ್ರಿಶೂರ್: ಕೇರಳ ವರ್ಮ ಕಾಲೇಜಿನಲ್ಲಿ ಚೀನೀ ಪರ ಉಪನ್ಯಾಸವನ್ನು ನೀಡಿರುವ ದೂರಿನ ಹಿನ್ನೆಲೆಯಲ್ಲಿ ಕೇಂದ್ರ ಗುಪ್ತಚರ ಸಂಸ್ಥೆ ತನಿಖೆ ಆರಂಭಿಸಿದೆ. ಈ ಘಟನೆ ಗಂಭೀರವಾಗಿದೆ ಮತ್ತು ಕೇಂದ್ರ ಏಜೆನ್ಸಿಗಳು ತನಿಖೆ ನಡೆಸಬೇಕು ಎಂದು ಬಿಜೆಪಿ ಹೇಳಿತ್ತು. ಈ ಕಾರ್ಯಕ್ರಮಕ್ಕೆ ಚೀನಾ ಸರ್ಕಾರದಿಂದ ಹಣ ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ಬಿಜೆಪಿ ನಾಯಕ ಅಡ್ವ. ಬಿ ಗೋಪಾಲಕೃಷ್ಣನ್ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಕಾಲೇಜು ಚೀನಾ ಪರ ಬೇಹುಗಾರಿಕೆ ನಡೆಸುತ್ತಿದೆ. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರಮೋದ್ ಗೂಢಚಾರನಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಹಲವಾರು ಬಾರಿ ಚೀನಾಕ್ಕೆ ಭೇಟಿ ನೀಡಿದ್ದಾರೆ. ಇದರ ಹಿಂದೆ ಸಿಪಿಎಂ ಕೈವಾಡವಿದೆ ಎಂದು ಗೋಪಾಲಕೃಷ್ಣನ್ ಆರೋಪಿಸಿದ್ದಾರೆ.
ಪಕ್ಷದ ಹಂಗಾಮಿ ಕಾರ್ಯದರ್ಶಿ ಎ. ವಿಜಯರಾಘವನ್ ಚೀನಾದ ಪಿಆರ್ ಏಜೆಂಟ್. ಚೀನಾದ ಬಗ್ಗೆ ಕಲಿಕೆಯಲ್ಲಿ ಯಾವುದೇ ತಪ್ಪಿಲ್ಲ. ಆದರೆ ಉತ್ರ್ಪೇಕ್ಷಿಸುವುದು ರಾಷ್ಟ್ರ ವಿರೋಧಿ ಎಂದು ಗೋಪಾಲಕೃಷ್ಣನ್ ಹೇಳಿದರು. ಚೀನಾ ಮತ್ತು ಭಾರತವು ಮುಖಾಮುಖಿಯಾಗುತ್ತಿರುವಾಗ ಮತ್ತು ಭಾರತೀಯ ಸೈನಿಕರು ಚೀನಾದ ವಿರುದ್ಧ ಹೋರಾಡುತ್ತಿರುವಾಗ ಕೇರಳದ ಕಾಲೇಜುಗಳಲ್ಲಿ ಇಂತಹ ಘಟನೆಗಳು ಆಕ್ಷೇಪಾರ್ಹವೆಂದು ಬಿಜೆಪಿ ಅಭಿಪ್ರಾಯಪಟ್ಟಿದೆ.