ಮಂಜೇಶ್ವರ: ಜನಪ್ರತಿನಿಧಿಯಾಗಿ ಆಯ್ಕೆಯಾಗುವುದು ಸುಲಭಸಾಧ್ಯವಲ್ಲ. ನಿಶ್ಚಿತ ಗುರಿಯೊಂದಿಗೆ ಎಳವೆಯಿಂದಲೇ ಪ್ರಯತ್ನಗಳು ಸಾಗಿದರೆ ಐ.ಎ.ಎಸ್., ಐಪಿಎಸ್ ನಂತಹ ಉನ್ನತ ಪದವಿಯನ್ನು ಯಾರಿಗೂ ಗಳಿಸಬಹುದು ಎಂದು ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ತಿಳಿಸಿದರು.
ಬಂಗ್ರಮಂಜೇಶ್ವರ ಸರ್ಕಾರಿ ಫೌಢಶಾಲೆಯಲ್ಲಿ ಸಾಧಕರಿಗಾಗಿ ಶಾಲಾ ಶಿಕ್ಷಕ, ಶಿಕ್ಷಕೇತರ ವೃಂದ ಹಾಗೂ ರಕ್ಷಕ ಶಿಕ್ಷಕ ಸಂಘದ ವತಿಯಿಂದ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಅ|ಭಿನಂದನಾ ಸಮಾರಂಭದಲ್ಲಿ ಕಳೆದ ಸಾಲಿನ ಹತ್ತನೇ ತರಗತಿ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಗ್ರೇಡ್ ಪಡೆದ ನಾಲ್ವರು ವಿದ್ಯಾರ್ಥಿನಿಯರು ಹಾಗೂ ಎಲ್.ಎಸ್.ಎಸ್, ಎನ್ ಎಂ.ಎಂ.ಎಸ್ ಪರೀಕ್ಷೆಗಳಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳನ್ನು ಅಭಿನಂದಿಸಿ ಅವರು ಮಾತನಾಡಿದರು.
ಬಂಗ್ರಮಂಜೇಶ್ವರ ಸರ್ಕಾರಿ ಫೌಢಶಾಲೆಯ ಪೂರ್ವ ವಿದ್ಯಾರ್ಥಿಯಾದ ಶಾಸಕರು ಮಾತನಾಡಿ, ತನ್ನಲ್ಲಿಯ ನಾಯಕತ್ವ ಗುಣ ಶಾಲಾ ಕಾಲೇಜುಗಳಿಂದ ಲಭಿಸುದುದಾಗಿದೆ. ಜನನಾಯಕನಾಗಬೇಕೆಂಬ ಹಂಬಲ, ಪ್ರಯತ್ನ ಎಳವೆಯಿಂದಲೇ ಇತ್ತು ಎಂದು ಮನದಾಳದ ಅನುಭವಗಳನ್ನು ತಿಳಿಸಿದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಿ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ.ಸದಸ್ಯ ಗೋಲ್ಡನ್ ರಹಮಾನ್, ಮಂಜೇಶ್ವರ ಗ್ರಾ.ಪಂ.ಅಧ್ಯಕ್ಷೆ ಜೀನ್ ಲವೀನೊ ಮೊಂತೇರೊ, ಬ್ಲಾ.ಪಂ.ಸದಸ್ಯೆ ಶಂಸೀನ, ಜಿಲ್ಲಾ ವಿದ್ಯಾಧಿಕಾರಿ ನಂದಿಕೇಶನ್ ಎನ್, ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್, ನಿವೃತ್ತ ಮುಖ್ಯೋಪಾಧ್ಯಾಯಿನಿ ಲೋಲಾಕ್ಷಿ, ಮಾತೃಸಂಘದ ಅಧ್ಯಕ್ಷೆ ಅಸ್ಮ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ಮುಖ್ಯೋಪಾಧ್ಯಾಯಿನಿ ಸುನಿತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಭಾರ ಪ್ರಾಂಶುಪಾಲೆ ಶಬನಾ ಎಸ್ ಸ್ವಾಗತಿಸಿ,ಪ್ರತಿಭಾ ಟೀಚರ್ ವಂದಿಸಿದರು. ಸಿಲ್ವಿಯಾ ಟೀಚರ್ ನಿರೂಪಿಸಿದರು.