ಕೋಯಿಕ್ಕೋಡ್ : ನಿಫಾ ವೈರಸ್ ನ ಮೂಲವನ್ನು ಪತ್ತೆ ಹಚ್ಚಲು ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‌ಐವಿ) ಆರೋಗ್ಯಾಧಿಕಾರಿಗಳ ತಂಡ ಕೋಝಿಕ್ಕೋಡ್ ನಿಂದ ಹಣ್ಣು ತಿನ್ನುವ ಬಾವಲಿಗಳಿಂದ ಮಾದರಿಗಳನ್ನು ಸಂಗ್ರಹಿಸಿದೆ ಎಂದು ರಾಜ್ಯ ಸರಕಾರದ ಸಾರ್ವಜನಿಕ ಸಂಪರ್ಕ ಇಲಾಖೆ ಮಾಹಿತಿ ನೀಡಿದೆ. ಎನ್‌ಐವಿ ತಂಡ ನಿನ್ನೆ ಕೋಝಿಕ್ಕೋಡ್ ಗೆ ಭೇಟಿ ನೀಡಿದೆ.
ಕೇರಳದ ಆರೋಗ್ಯ ಸಚಿವೆ ಜಾರ್ಜ್ ಕೋಝಿಕ್ಕೋಡ್ನ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ನಿಫಾ ವೈರಸ್ ಸೋಂಕಿತ ಒಟ್ಟು 68 ಮಂದಿ ದಾಖಲಾಗಿದ್ದಾರೆ ಎಂದು ಸೆಪ್ಟಂಬರ್ 8ರಂದು ಹೇಳಿದ್ದರು.
ಕೇರಳದಲ್ಲಿ ನಿಫಾ ವೆರಸ್ ಸೋಂಕಿನಿಂದ ಮೊದಲ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ವೈದ್ಯಕೀಯ ತಂಡ ಸೆಪ್ಟಂಬರ್ 5ರಂದು ಕೇರಳದ ಕೋಝಿಕ್ಕೋಡ್ ಜಿಲ್ಲೆಗೆ ಧಾವಿಸಿತ್ತು.