ಕಾಸರಗೋಡು: ಜಿಲ್ಲೆಯ ಸಾಮಾಜಿಕ-ಸಾಂಸ್ಕøತಿಕ ಸಂಘಟನೆ ರಂಗಚಿನ್ನಾರಿ ಕಾಸರಗೋಡು ವತಿಯಿಂದ ಚಿತ್ರ ನಟ, ರಂಗ ನಿರ್ದೇಶಕ ಕಾಸರಗೋಡು ಚಿನ್ನಾ ಭಾಷಾಂತರಿಸಿದ ಎರಡು ಕೊಂಕಣಿ ನಾಟಕ'ಸೂಣೆ'ಮತ್ತು ಸೂಣೆ ಬಾಲ'ಪುಸ್ತಕಗಳ ಬಿಡುಗಡೆ ಸಮಾರಂಭ ಇಂದು(ಸೆ. 11ರಂದು) ಸಂಜೆ 5ಕ್ಕೆ ಕಾಸರಗೋಡು ಕರಂದಕ್ಕಾಡಿನ ಪದ್ಮಗಿರಿ ಕಲಾ ಕುಟೀರದಲ್ಲಿ ಜರುಗಲಿದೆ.
ಬೆಂಗಳೂರಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ಕಾರ್ಯಕ್ರಮ ಜರುಗಲಿದೆ. ಖ್ಯಾತ ವೈದ್ಯ ಡಾ. ಅನಂತ ಕಾಮತ್ ಸಮಾರಂಭ ಉದ್ಘಾಟಿಸುವರು. ಪ್ರಶಸ್ತಿ ವಿಜೇತ ಲೇಖಕ ಬಿ.ನರಸಿಂಗ ರಾವ್ ಪುಸ್ತಕ ಬಿಡುಗಡೆಗೊಳಿಸುವರು. ಹಿರಿಯ ಪತ್ರಕರ್ತ ರವೀಂದ್ರ ಜೋಷಿ ಮೈಸೂರು ಹಾಗೂ ಯಕ್ಷಗಾನ ಕಲಾವಿದ ಮುರಳೀಧರ ಯಾದವ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಈ ಸಂದರ್ಭ ಹಿರಿಯ ರಂಗಕರ್ಮಿ ಪಬ್ಬಾ ಕೊರಕ್ಕೋಡು ಅವರನ್ನು ಸನ್ಮಾನಿಸಲಾಗುವುದು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಪ್ರಜ್ಞಾ ಕಿರಣ್ ಪ್ರಭು ಅವರಿಂದ ಭಕ್ತಿ ಭಾವಗೀತೆಗಳ ಗಾನ ವೈಭವ ನಡೆಯಲಿರುವುದು.