HEALTH TIPS

ಈ ಗ್ರಾಮದಲ್ಲಿ ಬಾಲಕಿಯರಿಗೆ ಪ್ರತ್ಯೇಕ ಸ್ಪರ್ಧಾತ್ಮಕ ಪರೀಕ್ಷಾ ಗ್ರಂಥಾಲಯ: ಬೇಟಿ ಬಚಾವೊ ಬೇಟಿ ಪಡಾವೊ ಯೋಜನೆಯಡಿ ನಿರ್ಮಾಣ

                 ನವದೆಹಲಿಉತ್ತರ ದೆಹಲಿಯ ಕರಲ ಎಂಬ ಹಳ್ಳಿಯೊಂದರಲ್ಲಿ ಬಾಲಕಿಯರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಪ್ರೋತ್ಸಾಹ ನೀಡುವ ಸಲುವಾಗಿ ಪ್ರತ್ಯೇಕ ಗ್ರಂಥಾಲಯವನ್ನು ಪ್ರಾರಂಭ ಮಾಡಲಾಗಿದೆ.

           ಬೇಟಿ ಬಚಾವೊ ಬೇಟಿ ಪಡಾವೊ ಯೋಜನೆ ಅಡಿ ಈ ಲೈಬ್ರರಿಯನ್ನು ತೆರೆಯಲಾಗಿದೆ. ಈ ಭಾಗದ ಸುತ್ತಮುತ್ತ ಎಲ್ಲೂ ಗ್ರಂಥಾಲಯಗಳಿಲ್ಲ. ಓದಲು ಹೋಗಬೇಕೆಂದರೆ ತುಂಬಾ ದೂರ ಪ್ರಯಾನ ನಡೆಸಬೇಕು. ಅದು ಹಳ್ಳಿಯ ಹೆಣ್ಣುಮಕ್ಕಳಿಗೆ ಆಗದ ಮಾತು. ಹೀಗಾಗಿ ಈ ಸವಲತ್ತನ್ನು ತೆರೆಯಲಾಗಿದೆ.

ಗ್ರಂಥಾಲಯದ ಉಪಯೋಗವನ್ನು ಕೇವಲ ಶಾಲಾ ಕಾಲೇಜು ಬಾಲಕಿಯರು ಮಾತ್ರವಲ್ಲ, ಹೆಂಗಸರೂ ಪಡೆದುಕೊಳ್ಳಬಹುದಾಗಿದೆ. ಮೆಡಿಕಲ್, ಎಂಜಿನಿಯರಿಂಗ್, ಯುಪಿಎಸ್ಸಿ ಮತ್ತಿತರ ಪ್ರವೇಶ ಪರೀಕ್ಷೆಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಿಕೊಳ್ಳಲು ಗ್ರಂಥಾಲಯ ನೆರವಾಗಲಿದೆ.

             ಈ ಗ್ರಂಥಾಲಯದಲ್ಲಿನ ಪುಸ್ತಕಗಳನ್ನು ಐಎಎ ಸ್ ತರಬೇತಿ ಕೇಂದ್ರ ಆರಿಸಿದೆ. ಗ್ರಾಮದ ಪುರುಷರು ತಮ್ಮ ಬಳಿ ಬಂದು ಬಾಲಕಿಯರಿಗಾಗಿಯೇ ಪ್ರತ್ಯೇಕ ಸ್ಪರ್ಧಾತ್ಮಕ ಪುಸ್ತಕಗಳನ್ನೊಳಗೊಂಡ ಗ್ರಂಥಾಲಯ ಸ್ಥಾಪನೆಗೆ ನೆರವು ಕೋರಿದ್ದರು ಎಂದು ಸೌಮ್ಯಾ ಶರ್ಮಾ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries