ಕೋಝಿಕ್ಕೋಡ್: ಕುಟ್ಟ್ಯಾಡಿಯಲ್ಲಿ ಕೊರೋನಾ ರೋಗಿಯ ಮನೆಯನ್ನು ದರೋಡೆ ಮಾಡಿದ ಕಳ್ಳನಿಗೆ ಕೊರೊನಾ ದೃಢಪಟ್ಟ ಘಟನೆ ನಡೆದಿದೆ. ತೊಟ್ಟಿಲಪಾಲಂನಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯ ಮನೆಯಲ್ಲಿ ಕಳ್ಳತನ ನಡೆದಿದೆ.
ಟಿವಿ, ಎಲೆಕ್ಟ್ರಾನಿಕ್ ಸಾಧನಗಳು ಮತ್ತು ಹಣವನ್ನು ಕಳವು ಮಾಡಲಾಗಿದೆ. ಕುಟುಂಬದವರ ದೂರಿನ ಮೇರೆಗೆ ಪೋಲೀಸರು ಪ್ರಕರಣವನ್ನು ಕೈಗೆತ್ತಿಕೊಂಡಿದ್ದರು. ಮುಂದಿನ ತನಿಖೆಯಲ್ಲಿ ಕಳ್ಳ ಸಿಕ್ಕಿಬಿದ್ದ.
ತೊಟ್ಟಿಲಪಾಲಂ ವಿನೋದನ್ ಎಂಬ ವ್ಯಕ್ತಿಯನ್ನು ಪೋಲೀಸರು ಬಂಧಿಸಿದ್ದಾರೆ. ಆರೋಪಿಯು ತಪೆÇ್ಪಪ್ಪಿಕೊಂಡ ನಂತರ ಆತನನ್ನು ನಾದಪುರಂ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ ಆತನನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಯಿತು. ಪರೀಕ್ಷಾ ಫಲಿತಾಂಶಗಳು ಆರೋಪಿಗೆ ಕೋವಿಡ್ ಪಾಸಿಟಿವ್ ಇರುವುದನ್ನು ತೋರಿಸಿದೆ. ನಂತರ ಆತನನ್ನು ರೋಗಲಕ್ಷಣಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಯ ನಂತರ ಆರೋಪಿಯನ್ನು ಕೋಝಿಕ್ಕೋಡ್ ಜೈಲಿನ ಕೊರೋನಾ ಸೆಲ್‍ಗೆ ಸ್ಥಳಾಂತರಿಸಲಾಗುವುದು ಎಂದು ಪೋಲೀಸರು ತಿಳಿಸಿದ್ದಾರೆ.