ಕೊಚ್ಚಿ: ಕೊಚ್ಚಿ ಶಿಫ್ ಯಾರ್ಡ್ ನಲ್ಲಿರುವ ಐಎನ್.ಎಸ್ ವಿಕ್ರಾಂತ್ ನೌಕೆಯನ್ನು ಬಾಂಬ್ ಮೂಲಕ ಸ್ಪೋಟಿಸುವುದಾಗಿ ಅನಾಮಧೇಯ ಬೆದರಿಕೆ ಸಂದೇಶವೊಂದು ಬಂದಿದೆ. ಶಿಪ್ ಯಾರ್ಡ್ ಉದ್ಯೋಗಿಗಳು ಸ್ವೀಕರಿಸಿದ ಇ-ಮೇಲ್ ನ್ನು ಅನುಸರಿಸಿ ಕೊಚ್ಚಿ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ. ವಿಮಾನವಾಹಕ ನೌಕೆಯನ್ನು ಬಾಂಬ್ ಸ್ಕ್ವಾಡ್ ಮತ್ತು ಶ್ವಾನದಳದಿಂದ ಪರಿಶೀಲಿಸಿತು.
ಶಿಪ್ ಯಾರ್ಡ್ ಅಧಿಕಾರಿಗಳಿಗೆ ಇಮೇಲ್ ಬಂದಿದ್ದು, ಹಡಗಿನಲ್ಲಿ ಬಾಂಬ್ ದಾಳಿ ನಡೆಸಲಾಗುವುದು ಎಂದು ಬೆದರಿಸಲಾಗಿದೆ. ಕೊಚ್ಚಿ ಸೌತ್ ಪೋಲೀಸರು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಇಮೇಲ್ ನಲ್ಲಿ ನೌಕೆಯ ಪ್ರಮುಖ ಮಾಹಿತಿಯನ್ನು ಒಳಗೊಂಡಿರುವುದರಿಂದ ಪೋಲೀಸರು ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸುತ್ತಿದ್ದಾರೆ. ಬಾಂಬ್ ಸ್ಕ್ವಾಡ್ ಮತ್ತು ಶ್ವಾನದಳವು ವಿಮಾನವಾಹಕ ನೌಕೆ ಮತ್ತು ಹತ್ತಿರದ ಇತರ ನಾಲ್ಕು ಹಡಗುಗಳನ್ನು ಪರಿಶೀಲಿಸಿತು.
ಅನಾಮಧೇಯ ಇಮೇಲ್ ಮೂಲದ ಬಗ್ಗೆ ತನಿಖೆ ನಡೆಯುತ್ತಿದೆ. ಹಡಗು ನಿರ್ಮಾಣ ಪ್ರಗತಿಯಲ್ಲಿರುವಾಗ ಅಫ್ಘಾನ್ ಪ್ರಜೆಯೊಬ್ಬರು ನೌಕಾನೆಲೆಯಲ್ಲಿ ಕೆಲಸ ಮಾಡಿದ್ದಾರೆಯೇ ಎಂದು ವಿವಿಧ ಏಜೆನ್ಸಿಗಳು ತನಿಖೆ ನಡೆಸುತ್ತಿರುವ ಮಧ್ಯೆ ಈ ಬೆದರಿಕೆ ಕರೆ ಬಂದಿದೆ. ಅಫಘಾನ್ ಪ್ರಜೆಗೆ ಭಯೋತ್ಪಾದಕ ಸಂಪರ್ಕವಿದೆ ಎಂದು ಗುರುತಿಸಲಾಗದಿದ್ದರೂ, ಆತ ಪಾಕಿಸ್ತಾನದಲ್ಲಿಯೂ ಕೆಲಸ ಮಾಡುತ್ತಿದ್ದ ಎಂದು ಪತ್ತೆಯಾದ ನಂತರ ಪ್ರಕರಣವನ್ನು ಎನ್.ಐ.ಎಗೆ ಒಪ್ಪಿಸಲು ಪೋಲೀಸರು ನಿರ್ಧರಿಸಿದ್ದರು.