ನವದೆಹಲಿ: 'ಪಿಎಂ ಕೇರ್ಸ್ ಫಂಡ್ ಕೇಂದ್ರ ಸರ್ಕಾರದ ನಿಧಿಯಲ್ಲ. ಈ ನಿಧಿಯಡಿ ಸಂಗ್ರಹವಾಗುವ ಮೊತ್ತ ಕನ್ಸಾಲಿಡೆಟೆಡ್ ಫಂಡ್ ಆಫ್ ಇಂಡಿಯಾಕ್ಕೆ ಸಂದಾಯವಾಗುವುದಿಲ್ಲ' ಎಂದು ಪ್ರಧಾನಿ ಮಂತ್ರಿ ಕಚೇರಿ (ಪಿಎಂಒ) ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
ಪಿಎಂಒದ ಅಧೀನ ಕಾರ್ಯದರ್ಶಿ, ಹೈಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಈ ಮಾಹಿತಿ ನೀಡಿದ್ದಾರೆ. ಅವರು ಪಿಎಂ ಕೇರ್ಸ್ ಟ್ರಸ್ಟ್‌ನ ಗೌರವ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
'ಟ್ರಸ್ಟ್ ಪಾರದರ್ಶಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಸಿಎಜಿ ಅವರಿಂದ ನೇಮಕವಾಗಿರುವ ಚಾರ್ಟರ್ಡ್ ಅಕೌಂಟಂಟ್ ಅವರಿಂದ ಟ್ರಸ್ಟ್‌ನ ಲೆಕ್ಕಪರಿಶೋಧನೆ ನಡೆಸಲಾಗುತ್ತದೆ' ಎಂದೂ ಮಾಹಿತಿ ನೀಡಿದ್ದಾರೆ.
ಪಿಎಂ ಕೇರ್ಸ್ ಫಂಡ್‌ಗೆ ಸಂಬಂಧಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಡಿ.ಎನ್.ಪಟೇಲ್ ಹಾಗೂ ನ್ಯಾಯಮೂರ್ತಿ ಅಮಿತ್ ಬನ್ಸಲ್ ಅವರಿರುವ ನ್ಯಾಯಪೀಠ, ವಿಚಾರಣೆಯನ್ನು ಸೆ. 27ಕ್ಕೆ ಮುಂದೂಡಿತು.