ಕಾಸರಗೋಡು: ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮಲಿನಜಲ ಸಂಸ್ಕರಣೆ ಘಟಕ ನಿರ್ಮಾಣಕ್ಕೆ ಚಾಲನೆ ಲಭಿಸಿದೆ. ಶಾಸಕ ಎನ್.ಎ.ನೆಲ್ಲಿಕುನ್ನು ಚಾಲನೆ ನಿಡಿದರು. ಕಾಸರಗೋಡು ನಗರಸಭೆ ಅಧ್ಯಕ್ಷ ನ್ಯಾಯವಾದಿ ವಿ.ಎಂ.ಮುನೀರ್, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್, ಸ್ಥಳೀಯಾಡಳಿತ ಇಲಾಖೆಯ ಕಾರ್ಯಕಾರಿ ಇಂಜಿನಿಯರ್ ಪಿ.ಪಿ.ರಮೇಶನ್, ಬ್ಲೋಕ್ ಪಂಚಾಯತ್ ಇಂಜಿನಿಯರ್ ಜೋಮೋನ್, ಡಾ.ಕೆ.ಕೆ.ರಾಜಾರಾಂ, ಡಾ.ಗೀತಾ ಗುರುದಾಸ್, ಬೇಬಿ ಜೋಸೆಫ್ ಮೊದಲಾದವರು ಉಪಸ್ಥಿತರಿದ್ದರು. 1.06 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಮಲಿನಜಲ ಸಂಸ್ಕರಣೆ ಘಟಕದಲ್ಲಿ ದಿನವೊಂದಕ್ಕೆ 2 ಲಕ್ಷ ಲೀಟರ್ ಮಲಿನಜಲ ಸಂಗ್ರಹ ಸಾಮಥ್ರ್ಯ ವಿರುವುದು.