HEALTH TIPS

ಗಮಕ ಶ್ರಾವಣ ಸಮಾರೋಪ

               ಬದಿಯಡ್ಕ: ಪ್ರಾಚೀನವಾದ ಗಮಕ ಕಲೆ ಭಾರತೀಯ ಸಂಸ್ಕøತಿಯ ದ್ಯೋತಕವಾಗಿದೆ. ಶ್ರಾವಣ ಮಾಸದಲ್ಲಿ ಶ್ರೀಮದ್ರಾಮಾಯಣದ ವಾಚನ-ವ್ಯಾಖ್ಯಾನಗಳನ್ನು ಮಾಡುವುದರಿಂದ ಮಾನವರ ಜೀವನವು ಸಾರ್ಥಕವಾಗುವುದು. ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರ ಭಾರತೀಯರ ಆರಾಧ್ಯಮೂರ್ತಿಯಾಗಿದ್ದಾನೆ. ಅಂತಹ ದಿವ್ಯಕಥೆಯನ್ನು ನಾವೆಲ್ಲರೂ ಗೌರವದಿಂದ ಮನನ ಮಾಡಬೇಕು ಎಂದು ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ಅಭಿಪ್ರಾಯ ಪಟ್ಟರು. 


           ಕರ್ನಾಟಕ ಗಮಕ ಕಲಾ ಪರಿಷತ್ತಿನ ಕೇರಳ ಗಡಿನಾಡ ಘಟಕ ಮತ್ತು ಸಿರಿಗನ್ನಡ ವೇದಿಕೆಯ ಕೇರಳ ಗಡಿನಾಡ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ಆದಿ ಗಮಕಿಗಳಾದ ಕುಶಲವರ ಜನ್ಮಮಾಸಾಚರಣೆಯ ಸರಣಿ ಕಾರ್ಯಕ್ರಮದ ಇತ್ತೀಚೆಗೆ ನಡೆದ ಸಮಾರೋಪವನ್ನು  ಶ್ರೀ ಮಠದ ಚಾತುರ್ಮಾಸ ಸಭಾಭವನದಲ್ಲಿ ದೀಪಜ್ವಾಲನೆಯೊಂದಿಗೆ ನೆರವೇರಿಸಿ ಮಾತನಾಡಿದರು.

             ಕರ್ನಾಟಕ ಸಮಿತಿಯ ಅಧ್ಯಕ್ಷ ನ್ಯಾಯವಾದಿ ಕೆ.ಯಂ.ಬಳ್ಳಕ್ಕುರಾಯರು ಸಮಾರೋಪ ಭಾಷಣ ಮಾಡಿ, ಪ್ರಾಚೀನ ಕಲೆಯಾಗಿರುವ ಗಮಕ ವಾಚನ-ವ್ಯಾಖ್ಯಾನಗಳನ್ನು  ಕಾಸರಗೋಡು ಜಿಲ್ಲೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ನಡೆಸುವುದರೊಂದಿಗೆ  ನಾಡಿನಾದ್ಯಂತ ಪ್ರಚಾರಮಾಡುತ್ತಿರುವುದು ಸ್ತುತ್ಯರ್ಹವಾಗಿದೆ. ಹಿಂದಿನ ಕಾಲದಲ್ಲಿ ರಾಜಾಶ್ರಯ ಇದ್ದಂತಹ ಗಮಕ ಕಲೆಯನ್ನು ಇಂದು ಅನಿವಾರ್ಯವಾಗಿ ಜನಸಾಮಾನ್ಯರೇ ಮುಂದುವರಿಸಿಕೊಂಡು ಹೋಗಬೇಕು ಎಂದು ನುಡಿದರು.

           ಗಮಕ ಕಲಾ ಪರಿಷತ್ತಿನ ಕೇರಳ ಗಡಿನಾಡ ಘಟಕದ ಅಧ್ಯಕ್ಷ ತೆಕ್ಕೆಕೆರೆ ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿದರು. 

         ಈ ಸಂದರ್ಭದಲ್ಲಿ ತೊರವೆ ರಾಮಾಯಣದ ಮಾಯಾಮೃಗದ ಕಥೆಯ ಆಯ್ದಭಾಗವನ್ನು  ಶಿಕ್ಷಕಿ ಕುಮಾರಿ ಅನುಷಾ ಎಸ್ ಮಯ್ಯ ಅವರು ಸುಶ್ರಾವ್ಯವಾಗಿ ವಾಚನ ಮಾಡಿದರು.ಸಾಹಿತ್ಯರತ್ನ ವಿ.ಬಿ.ಕುಳಮರ್ವ ಅವರು ಭಾವಪೂರ್ಣವಾಗಿ ವ್ಯಾಖ್ಯಾನ ಗೈದರು.

         ಸಿರಿಗನ್ನಡ ವೇದಿಕೆಯ ಅಧ್ಯಕ್ಷ ಮತ್ತು ಗಮಕ ಕಲಾ ಪರಿಷತ್ತಿನ ಕಾರ್ಯದರ್ಶಿ ವಿ.ಬಿ.ಕುಳಮರ್ವ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಗಮಕ ಪರಿಷತ್ತಿನ ಜೊತೆ ಕಾರ್ಯದರ್ಶಿ ಶಿವರಾಮ ಪಿ.ವಿ. ಸ್ವಾಗತಿಸಿ, ಚಾತುರ್ಮಾಸ ಸಮಿತಿಯ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries