ಕಾಸರಗೋಡು: ಕೋವಿಡ್ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಚಟುವಟಿಕೆ ಬಗ್ಗೆ ಸುಪ್ರೀಂಕೋರ್ಟಿನ ಶ್ಲಾಘನೆ ಪ್ರತಿಪಕ್ಷಗಳ ಸುಳ್ಳು ಪ್ರಚಾರಕ್ಕೆ ಪ್ರಹಾರವಾಗಿರುವುದಾಗಿ ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ಕೆ. ಶ್ರೀಕಾಂತ್ ತಿಳಿಸಿದ್ದಾರೆ. ಅವರು ಬಿಜೆಪಿ ಚೆಂಗಳ ಪಂಚಾಯಿತಿ 125ನೇ ಬೂತ್ ಸಮಿತಿ ವತಿಯಿಂದ ಶನಿವಾರ ನಡೆದ ಪಂಡಿತ್ ದೀನ್‍ದಯಾಳ್ ಉಪಾಧ್ಯಾಯ ಸಂಸ್ಮರಣಾ ಸಮಾರಂಭದಲ್ಲಿ ಪುಷ್ಪಾರ್ಚನೆ ನಡೆಸಿ ಮಾತನಾಡಿದರು. ಬೂತ್ ಸಮಿತಿ ಮುಖಂಡರು, ಪಕ್ಷದ ಕರ್ಯಕರ್ತರು ಪಾಲ್ಗೊಂಡಿದ್ದರು.
ಬಿಜೆಪಿ ಎಣ್ಮಕಜೆ ಪಂಚಾಯಿತಿಯ 187ನೇ ಖಂಡಿಗೆ ಬೂತ್ ಸಮಿತಿ ವತಿಯಿಂದ ನಡೆದ ಸಂಸ್ಮರಣಾ ಸಮಾರಂಭದಲ್ಲಿ ಬಿಜೆಪಿ ಮುಖಂಡ ಸದಾಶಿವ ಭಟ್ ಹರಿನಿಲಯ ದೀನ್‍ದಯಾಳ್ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿದರು. ಗ್ರಾಮ ಪಂಚಾಯಿತಿ ಸದಸ್ಯೆ ಉಷಾಗಣೇಶ್, ಹಿರಿಯ ಕಾರ್ಯಕರ್ತ ಸುಬ್ರಾಯ ನಾಯಕ್, ರಾಜೇಶ್ ಕುಲಾಲ್ ಮುಂತಾದವರು ಉಪಸ್ಥಿತರಿದ್ದರು.
ಪಂಡಿತ್ ದೀನ್‍ದಯಾಳ್ ಉಪಾಧ್ಯಯ ಜನ್ಮದಿನಾಚರಣೆ ಅಂಗವಾಗಿ ಬಿಜೆಪಿ ಕಾಞಂಗಾಡು ಮಂಡಲ ಸಮಿತಿ ವತಿಯಿಂದ ನಡೆದ ಸಂಸ್ಮರಣಾ ಸಮಾರಂಭದಲ್ಲಿ ಬಿಜೆಪಿ ರಾಜ್ಯ ಸಮಿತಿ ಕಾರ್ಯದರ್ಶಿ ಪಿ.ರಘುನಾಥ್ ಪುಷ್ಪಾರ್ಚನೆ ನಡೆಸಿದರು.
ಕುಂಬ್ಳೆ ಪಂಚಾಯತ್ ಸಮಿತಿ ವತಿಯಿಂದ ಕುಂಬ್ಳೆ ಪಕ್ಷದ ಕಚೇರಿಯಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಯರವರ ಜನ್ಮದಿನವನ್ನು ಅವರ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡುವ ಮೂಲಕ ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂಬ್ಳೆ ಪಂಚಾಯತ್ ಸಮಿತಿ ಅಧ್ಯಕ್ಷರಾದ ಕೆ ಸುಧಾಕರ ಕಾಮತ್ ವಹಿಸಿದರು.ಕಾರ್ಯಕ್ರಮವನ್ನು ಉದ್ದೇಶಿಸಿ ಮಂಡಲಧ್ಯಕ್ಷರಾದ ಮಣಿಕಂಠ ರೈ, ಮುರಳೀಧರ ಯಾದವ ಅವರು ಮಾತನಾಡಿದರು.ಕಾರ್ಯಕ್ರಮದಲ್ಲಿ ಪಕ್ಷದ ನೇತಾರರು ಭಾಗವಹಿಸಿದರು.