ಪೆರ್ಲ: ಕಾಟುಕುಕ್ಕೆ ಶ್ರೀಸುಬ್ರಹ್ಮಣ್ಯೇಶ್ವರ ಹಯರ್ ಸೆಕಂಡರಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಮತ್ತು ಮಾಜಿ ಪ್ರಬಂಧಕ ದಿ.ಡಿ.ಶಂಕರ ಮೋಹನದಾಸ ಆಳ್ವರ ಚತುರ್ಥ ಸಂಸ್ಮರಣೆ ಕಾಟುಕುಕ್ಕೆ ಡಿ.ಶಂಕರಮೋಹನದಾಸ ಆಳ್ವ ವೇದಿಕೆಯಲ್ಲಿ ಇತ್ತೀಚೆಗೆ ಜರಗಿತು. ಕಾರ್ಯಕ್ರಮವನ್ನು ಶಾಲಾ ಪ್ರಬಂಧಕರಾದ ಮಿತ್ತೂರು ಪುರುಷೋತ್ತಮ ಭಟ್ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು.
ಕಾಟುಕುಕ್ಕೆ ಸುಬ್ರಹ್ಮಣೇಶ್ವರ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಸಂಜೀವ ರೈ ಕೆಂಗಣಾಜೆ ಅಧ್ಯಕ್ಷತೆ ವಹಿಸಿದ್ದರು. ಅವರು ಈ ಸಂದರ್ಭ ಮಾತನಾಡಿ "ಪರೋಪಕಾರಂ ಇದಂ ಧರ್ಮಂ'' ಎನುವ ತತ್ವಾನುಸಾರ ಆದರ್ಶ ವ್ಯಕ್ತಿತ್ವವಾಗಿ ಸದಾ ಇತರರಿಗೆ ಮಾರ್ಗದರ್ಶಕರಾಗಿ , ಮಾದರಿಯಾಗಿ,ಸ್ಪೂರ್ತಿದಾಯಕರಾಗಿದ್ದವರು ಮೋಹನದಾಸ ಆಳ್ವರು.ಕಾಟುಕುಕ್ಕೆ ಶ್ರೀಸುಬ್ರಹ್ಮಣ್ಯೇಶ್ವರ ಹಯರ್ ಸೆಕಂಡರಿ ಶಾಲೆ ಅವರು ನೀಡಿದಂತಹ ಕೊಡುಗೆ ತ್ಯಾಗ ಮಹತ್ವಪೂರ್ಣವಾದುದುದೆಂದು ನುಡಿದರು. ಗಣ್ಯರು ಡಿ.ಶಂಕರಮೋಹನದಾಸ ಆಳ್ವರ ಭಾವ ಚಿತ್ರಕ್ಕೆ ಹಾರಾರ್ಪಣೆ ಮಾಡಿ ಪುಷ್ಪಾಂಜಲಿ ಅರ್ಪಿಸಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಸುಬ್ರಹ್ಮಣೇಶ್ವರ ಹಯರ್‍ಸೆಕಂಡರಿ ಶಾಲೆಯ ಪ್ರಾಂಶುಪಾಲ ಪದ್ಮನಾಭ ಶೆಟ್ಟಿ ಮಾತನಾಡಿ ದಿ.ಆಳ್ವರ ವ್ಯಕ್ತಿತ್ವ ಎಂದಿದೂ ಮಾದರಿ ಎಂದು ತಿಳಿಸಿದರು. ಕವಿ ,ಸಾಹಿತಿ ನಾಟಕಕಾರ ಪೆರ್ಲ ಜ್ಯೋತಿ ಮೆಡಿಕಲ್ ಮತ್ತು ಜನೌಷಧಿ ಕೇಂದ್ರದ ಡಾ. ಎಸ್ ಎನ್ ಭಟ್ ಪೆರ್ಲ, ಕವಿ ಸಾಹಿತಿ ಮತ್ತು ಸ್ವರ್ಗ ವಿವೇಕಾನಂದ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ವಾಸುದೇವ ಭಟ್, ಕಾಟುಕುಕ್ಕೆ ಶ್ರೀ ಸುಬ್ರಾಯ ಕ್ಷೇತ್ರದ ನಿವೃತ್ತ ಅರ್ಚಕ ನಾರಾಯಣ ಮಯ್ಯ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಶಾಲಾ ಆಡಳಿತ ಮಂಡಳಿ ಸದಸ್ಯರಾದ ಬಿ.ಯಸ್.ಗಂಭೀರ್ ಕಾಟುಕುಕ್ಕೆ, ವಿನೋಭ ಶೆಟ್ಟಿ, ಚಾಕಟೆ ಗೋಪಾಲಕೃಷ್ಣ ಭಟ್, ಶಿವರಾಮ ಭಟ್ ಪಡ್ಪು ಉಪಸ್ಥಿತರಿದ್ದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ರಾಮಚಂದ್ರ ಮಣಿಯಾಣಿ, ನಿವೃತ್ತ ಅಧ್ಯಾಪಕ ಲೋಕನಾಥ್ ಶೆಟ್ಟಿ ಮಾಯಿಲಂಗಿ,ಸುಬ್ರಹ್ಮಣ್ಯೇಶ್ವರ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಹರಿಪ್ರಸಾದ್ ಮಾಯಿಲಂಗಿ,ನಿವೃತ್ತ ಅಧ್ಯಾಪಕ ಈಶ್ವರ ಭಟ್ ಕಾನ ನುಡಿ ನಮನ ಸಲ್ಲಿಸಿದರು. ಅಧ್ಯಾಪಕರಾದ ಮನೋಹರ ಭಟ್, ಮಹೇಶ್ ಏತಡ್ಕ ,ಗೋವಿಂದನ್ ನಂಬೂದಿರಿ,ಕೃಷ್ಣನ್ ನಂಬೂದಿರಿ,ಸುರೇಶ್ ಕೆ,ಈಶ್ವರ್ ನಾಯಕ್ ,ವಿನಯ ಕುಮಾರ್, ಅಧ್ಯಾಪಿಕೆಯರಾದ ವಾಣಿಶ್ರೀ, ರಮಣಿ, ಸಂಧ್ಯಾ, ಅನಿತಾ ಎಸ್, ಉಷಾ, ಶ್ರೀವಿದ್ಯಾ ವೇಣುಗೋಪಾಲ್, ಕೀರ್ತಿ ಕೆ ಎಸ್, ನಿವೃತ್ತ ಕ್ಲರ್ಕ್ ರಘುರಾಮ ರೈ ಕಟ್ಟತ್ತಾಡೆ, ಅಧ್ಯಾಪಕರಾದ ಚಂದ್ರಹಾಸ ಅರೆಕ್ಕಾಡಿ, ಬಾಲಕೃಷ್ಣ ಎಂ.ವಿ, ಹನೀಫ್, ಶಾರದಾ, ಸಂಕಪ್ಪ ರೈ ಉಪಸ್ಥಿತರಿದ್ದರು. ಶ್ರೀ ಸುಬ್ರಹ್ಮಣ್ಯೇಶ್ವರ ಹಯರ್ ಸೆಕಂಡರಿ ಶಾಲೆಯ ಪ್ರಧ್ಯಾಪಕ ರಾಜೇಶ್ ಸಿ.ಯಚ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಪ್ರಾಧ್ಯಾಪಿಕೆ ವಾಣಿ ಕೆ ಸ್ವಾಗತಿಸಿ , ಪ್ರಧ್ಯಾಪಿಕೆ ಸರಸ್ವತಿ ಪ್ರಸನ್ನ ವಂದಿಸಿದರು.