HEALTH TIPS

ಪೆಗಾಸಸ್ ಗೂಢಚರ್ಯೆ ಪ್ರಕರಣ: ಸುಪ್ರೀಂನಿಂದ ಶೀಘ್ರ ಮಧ್ಯಂತರ ಆದೇಶ

                   ನವದೆಹಲಿ: ಪೆಗಾಸಸ್‌ ಗೂಢಚರ್ಯೆ ಪ್ರಕರಣವನ್ನು ಸ್ವತಂತ್ರವಾಗಿ ತನಿಖೆ ನಡೆಸುವಂತೆ ಒತ್ತಾಯಿಸಿ ಸಲ್ಲಿಸಿರುವ ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ ವಿವರವಾದ ಪ್ರಮಾಣ ಪತ್ರವನ್ನು ಸಲ್ಲಿಸಲು ಬಯಸುವುದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದು, ತಾನು ಶೀಘ್ರವೇ ಮಧ್ಯಂತರ ಆದೇಶ ನೀಡುವುದಾಗಿ ಕೋರ್ಟ್‌ ಹೇಳಿದೆ.

             'ನಾವು ಸದ್ಯ ಆದೇಶವನ್ನು ಕಾಯ್ದಿರಿಸಿದ್ದೇವೆ. ವಿವರವಾದ ಪ್ರಮಾಣಪತ್ರ ಸಲ್ಲಿಸುವ ವಿಚಾರವೇನಾದರೂ ಇದ್ದರೆ ತಿಳಿಸಬೇಕು, ಇನ್ನು ಎರಡು-ಮೂರು ದಿನಗಳಲ್ಲಿ ಮಧ್ಯಂತರ ಆದೇಶ ಹೊರಡಿಸುತ್ತೇವೆ' ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ನೇತೃತ್ವದ ಪೀಠ ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್‌ ತುಷಾರ್ ಮೆಹ್ತಾ ಅವರಿಗೆ ತಿಳಿಸಿತು.

              'ಸರ್ಕಾರ ಪ್ರಮಾಣಪತ್ರ ಸಲ್ಲಿಸಲು ಬಯಸುವುದಿಲ್ಲ ಎಂದು ನೀವು ಪದೇ ಪದೇ ಹೇಳುತ್ತಿದ್ದೀರಿ. ದೇಶದ ಭದ್ರತಗೆ ಸಂಬಂಧಿಸಿದ ಯಾವುದೇ ವಿಷಯವನ್ನು ನಮ್ಮ ಮುಂದೆ ಇಡಬೇಕು ಎಂದು ನಾವು ಬಯಸುತ್ತಿಲ್ಲ. ಸಮಿತಿಯೊಂದನ್ನು ರಚಿಸಿ, ಅದು ಸಲ್ಲಿಸುವ ವರದಿಯನ್ನು ನೀಡುವುದಾಗಿ ನೀವು ಹೇಳುತ್ತಿದ್ದೀರಿ. ಈ ಎಲ್ಲಾ ವಿಷಯಗಳನ್ನು ಗಮನಿಸಿ ನಾವು ಮಧ್ಯಂತರ ಆದೇಶ ನೀಡಬೇಕಿದೆ' ಎಂದು ಹೇಳಿದ ನ್ಯಾಯಪೀಠ, 'ಮೆಹ್ತಾ ಅವರೇ, ನೀವು ಪೊದೆಯ ಸುತ್ತ ಹೊಡೆಯುತ್ತಿದ್ದೀರಿ, ಅದು ಇಲ್ಲಿ ಪ್ರಶ್ನೆಯಲ್ಲ' ಎಂದು ಮಾರ್ಮಿಕವಾಗಿ ನುಡಿಯಿತು.

               ಇದಕ್ಕೆ ಮೊದಲು ಹೇಳಿಕೆ ನೀಡಿದ ತುಷಾರ್ ಮೆಹ್ತಾ, 'ಸರ್ಕಾರ ಯಾವ ಸಾಫ್ಟ್‌ವೇರ್ ಬಳಸಿದೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗದು, ಒಂದು ವೇಳೆ ಇಂತಹ ಮಾಹಿತಿಗಳನ್ನು ನೀಡಿದರೆ ಭಯೋತ್ಪಾದಕರು ಅದನ್ನು ನಿಗ್ರಹಿಸುವ ವ್ಯವಸ್ಥೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ' ಎಂದು ಹೇಳಿದ್ದರು.‌


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries