ತಿರುವನಂತಪುರಂ: ನವಕೇರಳಂ ಕರ್ಮ ಯೋಜನೆಯ ಸಂಯೋಜಕರಾಗಿ ಟಿಎನ್ ಸೀಮಾ ಅವರನ್ನು ನೇಮಿಸಲಾಗಿದೆ. ಕ್ಯಾಬಿನೆಟ್ ಸಮಿತಿ ಈ ನೇಮಕಾತಿ ಮಾಡಿದ್ದು, ಮೂರು ವರ್ಷಗಳ ವರೆಗೆ ಇವರ ಕರ್ತವ್ಯ ಅವಧಿಯಾಗಿರುತ್ತದೆ.
ಅವರು 2010 ರಿಂದ ಆರು ವರ್ಷಗಳ ಕಾಲ ಕೇರಳದಿಂದ ರಾಜ್ಯಸಭೆಯ ಸದಸ್ಯರಾಗಿದ್ದರು. ಅವರು ಸಿಪಿಐ (ಎಂ) ರಾಜ್ಯ ಸಮಿತಿಯ ಸದಸ್ಯರಾಗಿದ್ದಾರೆ.
ಸೀಮಾ ರಾಜ್ಯ ಯೋಜನಾ ಮಂಡಳಿಯಲ್ಲಿ ಸಾರ್ವಜನಿಕ ಯೋಜನೆ ಮತ್ತು ಮಹಿಳಾ ಸಬಲೀಕರಣ ಕಾರ್ಯಕ್ರಮಗಳ ಸಲಹೆಗಾರರಾಗಿ, ರಾಜ್ಯ ಲಿಂಗ ಸಲಹಾ ಮಂಡಳಿಯ ಸದಸ್ಯರಾಗಿ ಮತ್ತು ಕುಟುಂಬಶ್ರೀ ಮಿಷನ್ - ಆಡಳಿತ ಮಂಡಳಿಯ ಕಾರ್ಯಕಾರಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.