HEALTH TIPS

ಕೋಝಿಕ್ಕೋಡ್ ನಿಂದ ಸಂಗ್ರಹಿಸಿದ ಮಾದರಿಗಳಲ್ಲಿ ನಿಪಾ ಇರುವಿಕೆ ಪತ್ತೆ: ಗುರುತಿಸಿಕೊಂಡ ಪ್ರತಿಕಾಯ

Top Post Ad

Click to join Samarasasudhi Official Whatsapp Group

Qries

             ಕೋಝಿಕೋಡ್: ಬಾವಲಿಗಳಲ್ಲಿ ನಿಪಾ ವೈರಸ್ ಇರುವಿಕೆ ಕೊನೆಗೂ ದೃಢಪಟ್ಟಿದೆ.  ಕೋಝಿಕೋಡ್ ನಿಂದ ಸಂಗ್ರಹಿಸಿದ ಬಾವಲಿಗಳಲ್ಲಿ ನಿಪಾ ಪತ್ತೆಯಾಗಿದೆ. ನಿಪಾ ವಿರುದ್ಧದ ಪ್ರತಿಕಾಯವು ಎರಡು ಜಾತಿಯ ಬಾವಲಿಗಳಲ್ಲಿ ಕಂಡುಬಂದಿದೆ. ನಿಪಾ ವೈರಸ್ ಇರುವುದರಿಂದ ಈ ಬಾವಲಿಗಳಲ್ಲಿ ಪ್ರತಿಕಾಯಗಳು ಕಂಡುಬಂದಿವೆ. ವಿವಿಧ ವಿಭಾಗಗಳನ್ನು ಸಂಯೋಜಿಸುವ ಮೂಲಕ ಈ ವಿಷಯದ ಕುರಿತು ಹೆಚ್ಚಿನ ಅಧ್ಯಯನದ ಅಗತ್ಯವಿದೆ ಎಂದು ತಜ್ಞರು ಗಮನಸೆಳೆದಿರುವರು.

                    ಪುಣೆ ವೈರಾಲಜಿ ಸಂಸ್ಥೆಯಿಂದ ಫಲಿತಾಂಶಗಳು ಬಂದಿವೆ. ಕೆಲವು ಮಾದರಿಗಳ ಪರೀಕ್ಷಾ ಫಲಿತಾಂಶಗಳು ಇನ್ನಷ್ಟೇ ಹೊರಬೀಳಬೇಕಿದೆ. ಕೋಝಿಕೋಡ್ ಜಿಲ್ಲೆಯಲ್ಲಿ ಸೆಪ್ಟೆಂಬರ್ 5 ರಂದು 12 ವರ್ಷದ ಬಾಲಕ ನಿಪಾ ದಿಂದ ಮೃತಪಟ್ಟಿದ್ದ. ಆ ಬಳಿಕ, ಮಗುವಿನ ಮನೆ ಇರುವ ಚಾತ್ತಮಂಗಲಂ ಮತ್ತು ಹತ್ತಿರದ ಪ್ರದೇಶಗಳಿಂದ ಬಾವಲಿಗಳನ್ನು ಹಿಡಿಯಲಾಯಿತು ಮತ್ತು ಜೊಲ್ಲಿನ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಪರೀಕ್ಷಾ ಮಾದರಿಗಳನ್ನು ಕೇಂದ್ರ ತಂಡ ನೇರವಾಗಿ ಸಂಗ್ರಹಿಸಿತ್ತು.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries