ಕಾಸರಗೋಡು: ಮರಾಟಿ ಸಮುದಾಯದ ವಿವಿಧ ಸವಲತ್ತು ಒದಗಿಸುವಲ್ಲಿ ಉಂಟಾಗಿರುವ ಲೋಪ ಸರಿಪಡಿಸುವಂತೆ ಆಗ್ರಹಿಸಿ ಮರಾಟಿ ಸಂರಕ್ಷಣಾ ಸಮಿತಿ ಎಣ್ಮಕಜೆ ಪಂಚಾಯಿತಿ ಸಮಿತಿ ವತಿಯಿಂದ ಪೆರ್ಲದ ಟ್ರೈಬಲ್ ಎಕ್ಸ್‍ಟೆನ್ಶನ್ ಕಚೇರಿ ಎದುರು ಧರಣಿ ನಡೆಯಿತು.
ಕೇರಳ ಮರಾಟಿ ಸಂರಕ್ಷಣಾ ಸಮಿತಿ ರಾಜ್ಯ ಸಮಿತಿ ಅಧ್ಯಕ್ಷ ಶ್ಯಾಂ ಪ್ರಸಾದ್ ಮಾನ್ಯ ಧರಣಿ ಉದ್ಘಾಟಿಸಿದರು. ಎಣ್ಮಕಜೆ ಸಮಿತಿ ಅಧ್ಯಕ್ಷ ನಾರಾಯಣ ನಾಯ್ಕ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ಸಮುದಾಯದ ಪ್ರಮುಖರಾದ ಡಾ. ಕೇಶವ ನಾಯ್ಕ್ ಖಂಡಿಗೆ, ರಾಜ್ಯ ಸಮಿತಿ ಉಪಾಧ್ಯಕ್ಷ ನಾರಾಯಣ ನಾಯ್ಕ್ ಅಡ್ಕಸ್ಥಳ, ರಾಜ್ಯ ಸಮಿತಿ ಸದಸ್ಯರಾದ ಗಂಗಾಧರ್ ನೀರ್ಚಾಲ್, ಕೃಷ್ಣ ಗೋಳಿತ್ತಡ್ಕ, ಪಂಚಾಯಿತಿ ಸಮಿತಿ ಸದಸ್ಯರು, ಮಹಿಳಾ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಈ ಸಂದರ್ಭ ಮರಾಟಿ ಸಮುದಾಯಕ್ಕೆ ಲಭಿಸಬೇಕಾದ ಸವಲತ್ತುಗಳನ್ನು ತಕ್ಷಣ ಒದಗಿಸಿಕೊಡುವ ನಿಟ್ಟಿನಲ್ಲಿ ಮನವಿಯನ್ನು ಟೈಬಲ್ ಎಕ್ಸ್‍ಟೆನ್ಶನ್ ಅಧಿಕಾರಿಗೆ ಸಲ್ಲಿಸಲಾಯಿತು. ಪಂಚಾಯಿತಿ ಸಮಿತಿ ಕಾರ್ಯದರ್ಶಿ ಚಂದ್ರಶೇಖರ ಸ್ವಾಗತಿಸಿದರು. ಕೋಶಾಧಿಕಾರಿ ಜಯಕೃಷ್ಣ ಸ್ವರ್ಗ ವಂದಿಸಿದರು.