HEALTH TIPS

ಸದಾಕಾಲ ಮನೆಯೊಳಗೇ ಇರುವುದರಿಂದ ಈ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಬಹುದು!

               ಸದಾ ಮನೆಯೊಳಗೆ ಇರುವುದು ದೇಹಕ್ಕೂ, ಮನಸ್ಸಿಗೂ ಒತ್ತಡ ತರುವುದು. ಅದರಲ್ಲೀ ಕೊರೊನಾ ಕಾರಣದಿಂದ ವರ್ಕ್ ಫ್ರಂ ಹೋಮ್ ಆದಮೇಲಂತೂ ಈ ಒತ್ತಡ ಮತತ್ತಷ್ಡು ಹೆಚ್ಚಾಗಿ, ದೈಹಿಕ ಹಾಗೂ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದ ಕೌಟುಂಬಿಕ ಸಮಸ್ಯೆಗಳ ಜೊತೆಗೆ ಸಾಕಷ್ಟು ಮಾನಸಿಕ ಸಮಸ್ಯೆಗಳು ಜನರನ್ನು ಕಾಡುತ್ತಿರುವುದು ದುರಾದೃಷ್ಟಕರ ಸಂಗತಿಯಾಗಿದೆ. ದೀರ್ಘಕಾಲದಿಂದ ಸಮಾಜದಿಂದ ದೂರವಾಗಿ, ಸದಾ ಮನೆಯೊಳಗೆ ಇರುವುದರಿಂದ ಎಂತಹ ನಕಾರಾತ್ಮಕ ಪ್ರಭಾವ ಆಗುತ್ತಿದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.


               ಹೆಚ್ಚು ಕಾಲ ಮನೆಯೊಳಗೆ ಇರುವುದರಿಂದ ಆರೋಗ್ಯದ ಮೇಲೆ ಬೀರುವ ಪರಿಣಾಮವನ್ನು ಈ ಕೆಳಗೆ ನೀಡಲಾಗಿದೆ:


                                       ಹೊಸ ಅಧ್ಯಯನ:

             ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ನಡೆಸಿದ ಅಧ್ಯಯನದ ಪ್ರಕಾರ, ಸಾಮಾಜಿಕವಾಗಿ ಪ್ರತ್ಯೇಕವಾಗಿರುವುದು ಅಕಾಲಿಕ ಮರಣದ ಹೆಚ್ಚಿನ ಅಪಾಯಕ್ಕೆ ಕಾರಣವಾಗುತ್ತಿದೆಯಂತೆ. ಜೊತೆಗೆ ಬುದ್ಧಿಮಾಂದ್ಯತೆಯನ್ನು ಅಭಿವೃದ್ಧಿಪಡಿಸುವ ಅಪಾಯವು 50 ಪ್ರತಿಶತ ಹೆಚ್ಚಾದರೆ, ಹೃದಯ ಸಂಬಂಧಿ ಕಾಯಿಲೆಯ ಪ್ರಮಾಣ 29 ರಷ್ಟು ಹೆಚ್ಚಾಗಿದೆ, ಅಷ್ಟೇ ಅಲ್ಲ, ಶೇ, 25 ರಷ್ಟು ಕ್ಯಾನ್ಸರ್, 32 ಶೇದಷ್ಟು ಪಾರ್ಶ್ವವಾಯುಗೆ ತುತ್ತಾಗುವ ಅಪಾಯ ಹೆಚ್ಚಾಗಿದೆ ಎಂದು ಕಂಡುಕೊಳ್ಳಲಾಗಿದೆ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಸದ್ಯ ಕೊರೊನಾದಿಂದ ಪಾರಾಗಲು ಇರುವ ಮಾರ್ಗವಾದರೂ, ದೀರ್ಘಕಾಲದವರೆಗೆ ಮನೆಯೊಳಗೆ ಇರುವುದರಿಂದ ಆರೋಗ್ಯಕ್ಕೆ ಹಾನಿಯುಂಟಾಗುವುದು.

                            ರೂಮ್ ಇಸ್ ಎವರಿಥಿಂಗ್:

              ಪ್ರಸ್ತುತ ಸಾಂಕ್ರಾಮಿಕವು ಜನರ ಮಾನಸಿಕ ಆರೋಗ್ಯದ ಮೇಲೆ ಹಲವಾರು ರೀತಿಯಲ್ಲಿ ಪರಿಣಾಮ ಬೀರಿದೆ. ಇದು ಜನರ ವೈಯಕ್ತಿಕ, ವೃತ್ತಿಪರ ಮತ್ತು ಆರ್ಥಿಕ ಸನ್ನಿವೇಶಗಳಿಗೆ ಸಂಬಂಧಿಸಿದಂತೆ ಹಲವಾರು ಸವಾಲುಗಳನ್ನು ಸೃಷ್ಟಿಸಿದೆ. ಮನೆಯಿಂದ ಕೆಲಸ ಮಾಡುವರಿಗೆ ತಮ್ಮ ರೂಮೇ ಸರ್ವಸ್ವ ಆಗಿದೆ. ಆಟದ ಮೈದಾನದಲ್ಲಿ ಆಡುತ್ತಿದ್ದ ಮಕ್ಕಳು ಒಳಗೇ ಕೂತು ಮಂಕಾಗಿ ಮೊಬೈಲ್ ದಾಸರಾಗಿದ್ದಾರೆ. ಹೊರ ಹೋದರೆ, ಕೊರೊನಾಕ್ಕೆ ತುತ್ತಾಗುವ ಆತಂಕ. ಆದ್ದರಿಂದ ಮನೆಯಲ್ಲಿರಲಾರದೇ, ಹೊರಹೋಗಲಾರದೇ, ಮಾನಸಿಕ ಅಸ್ವಸ್ಥತೆಗೆ ಗುರಿಯಾಗುತ್ತಿದ್ದಾರೆ.

ದೀರ್ಘಕಾಲ ಮನೆಯೊಳಗೆ ಇರುವುದರಿಂದ ಉಂಟಾಗುವ ಸಮಸ್ಯೆಗಳು:

                 ಕೆಲಸ, ಮನೆ ಮೊದಲಾದ ಒತ್ತಡಗಳು ನಮ್ಮಲ್ಲಿ ಖಿನ್ನತೆ, ಪ್ಯಾನಿಕ್ ಡಿಸಾರ್ಡರ್, ಒಸಿಡಿ, ನಿದ್ರಾಹೀನತೆ ಮತ್ತು ಹೈಪೋಕಾಂಡ್ರಿಯಾಸಿಸ್ ಸಮಸ್ಯೆಗಳಿಗೆ ಒಳಗಾಗುವಂತೆ ಮಾಡುತ್ತದೆ. ವರ್ತನೆಯ ಸಮಸ್ಯೆಗಳಿಗೆ ಬಂದರೆ, ಹೆಚ್ಚು ಕೋಪ, ಕಿರಿಕಿರಿ, ಹತಾಶೆಯನ್ನು ಜೀವನದಲ್ಲಿ ಬೆಳೆಸಿಕೊಳ್ಳುತ್ತಾರೆ. ಅಷ್ಟೆ ಅಲ್ಲ, ಕೆಲವರು ಅತಿಯಾದ ಧೂಮಪಾನ ಅಥವಾ ಮದ್ಯಪಾನವನ್ನೂ ಮೈಗೂಡಿಕೊಂಡಿರುತ್ತಾರೆ. ಸದಾ ಒಳಗೇ ಇರುವುದರಿಂದ ವ್ಯಾಯಾಮದ ಕೊರತೆಯೂ ಉಂಟಾಗಿ, ತೂಕ ಹೆಚ್ಚಾಗುವುದು, ಮಧುಮೇಹದ ನಿಯಂತ್ರಣ ಅಥವಾ ರಕ್ತದೊತ್ತಡದಂತಹ ದೈಹಿಕ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಲಾಂಭಿಸುತ್ತವೆ.

                 ಇದರಿಂದ ಹೊರಬರುವುದು ಹೇಗೆ:

  1.             ಮನೆಯಲ್ಲಿದ್ದಾಗ ವೈಯಕ್ತಿಕ ಮತ್ತು ವೃತ್ತಿಪರ ಜೀವನ ಸಮತೋಲನವನ್ನು ನಿರ್ವಹಿಸುವುದು ದೊಡ್ಡ ಸವಾಲಾಗಿದೆ. ಮನಸ್ಸು ಮತ್ತು ದೇಹಕ್ಕೆ ಶಾಂತಿ ದೊರೆಯಲು ಈ ಕೆಳಗಿನ ಸಲಹೆಗಳನ್ನು ಪಾಲಿಸಿ.
  2.                     ದಿನವನ್ನು ಅಚ್ಚುಕಟ್ಟಾಗಿ ವಿಭಜಿಸಿ, ಒಂದು ದಿನಚರಿ ಫಾಲೋ ಮಾಡಿ.
  3.          ವೃತ್ತಿಪರ ಜೀವನಕ್ಕಾಗಿ, ಅಂದರೆ ಕೆಲಸಕ್ಕಾಗಿ ಒಂದು ಟೇಬಲ್ ರೆಡಿ ಮಾಡಿ, ಅಲ್ಲೇ ಕೆಲಸ ಮಾಡಿ.
  4. ಹಾಸಿಗೆಯನ್ನು ನಿಮ್ಮ ಕೆಲಸದ ಮೇಜಿನಂತೆ ಬಳಸುವುದನ್ನು ತಪ್ಪಿಸಿ.
  5. ಆಗಾಗ ವಿರಾಮಗಳನ್ನು ತೆಗೆದುಕೊಳ್ಳಿ.
  6.                ನಿಮ್ಮ ಕುಟುಂಬದೊಂದಿಗೆ ಸಮಯವನ್ನು ಕಳೆಯಿರಿ.
  7. ಸರಿಯಾಗಿ ನಿದ್ದೆ ಮಾಡಿ.
  8.              ಅತಿಯಾದ ಮದ್ಯಪಾನ ಅಥವಾ ಧೂಮಪಾನವನ್ನು ತಪ್ಪಿಸಿ.
  9. ಸಾಮಾಜಿಕವಾಗಿ ಸಂಪರ್ಕದಲ್ಲಿರಿ, ಭಾವನೆಗಳನ್ನು ಹಂಚಿಕೊಳ್ಳಿ.
  10.          ಪರೀಕ್ಷೆಯ ಸಂದರ್ಭಗಳಲ್ಲಿ ಸಕಾರಾತ್ಮಕ ಮನೋಭಾವವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.
  11.                ಬೇಸರವನ್ನು ತಪ್ಪಿಸಲು ಹೊಸ ಹವ್ಯಾಸವನ್ನು ಬೆಳೆಸಿಕೊಳ್ಳಿ.
  12.          ದಿನವೂ ವ್ಯಾಯಾಮ ಮಾಡಿ. ಧ್ಯಾನ ಮತ್ತು ಯೋಗವು ಆತಂಕ ಮತ್ತು ದಿನನಿತ್ಯದ ಒತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
  13.             ಮೇಲಿನ ಕ್ರಮಗಳು ವಿಫಲವಾದರೆ, ಮಾನಸಿಕ ಆರೋಗ್ಯ ವೃತ್ತಿಪರರಿಂದ ಸಹಾಯವನ್ನು ಪಡೆಯಿರಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries