ತಿರುವನಂತಪುರಂ: ಕೃಷಿ ಕಾನೂನುಗಳ ವಿರುದ್ಧ ಘೋಷಿಸಲಾಗಿರುವ ಹರತಾಳದ ವಿರುದ್ಧ ಕೆಎಸ್‍ಆರ್‍ಟಿಸಿ ನೌಕರರು ವಿನೂತನವಾಗಿ ಧ್ವನಿಯೆತ್ತಿದ್ದಾರೆ. ಬೆಳಿಗ್ಗೆ 5 ಗಂಟೆಯಿಂದಲೇ ನೌಕರರು ವಿವಿಧ ಡಿಪೆÇೀಗಳಿಗೆ ಆಗಮಿಸಿ ತಮ್ಮ ಹಾಜರಾತಿಯನ್ನು ನೋಂದಾಯಿಸಿಕೊಂಡರು. ಉತ್ತಮ ಶೇಕಡಾವಾರು ಉದ್ಯೋಗಿಗಳು ಸೋಮವಾರ ಕೆಲಸಕ್ಕೆ ಹಾಜರಾಗಿದ್ದು, ಸರ್ಕಾರಕ್ಕೆ ಹಿನ್ನಡೆಯಾಗಿದೆ. ಕೇರಳದಾತ್ಯಂತ ಕೆಎಸ್‍ಆರ್‍ಟಿಸಿ ನೌಕರರಲ್ಲಿ ಶೇ .70 ಕ್ಕೂ ಮಿಕ್ಕಿದ ನೌಕರರು ಹಾಜರಾಗಿದ್ದಾರೆ ಎಂದು ಅಂದಾಜಿಸಲಾಗಿದೆ.
10 ವರ್ಷಗಳಿಂದ ತಮ್ಮ ವೇತನವನ್ನು ನವೀಕರಿಸದ ಕಾರಣ ನೌಕರರು ಹರತಾಳವನ್ನು ವಿರೋಧಿಸುತ್ತಿದ್ದಾರೆ. ಇತರ ಸರ್ಕಾರಿ ನೌಕರರ ವೇತನವನ್ನು ನವೀಕರಿಸಿದ್ದರೂ ಕೆಎಸ್‍ಆರ್‍ಟಿಸಿ ನೌಕರರ ವೇತನವನ್ನು ನವೀಕರಿಸದಿರುವುದು ನೌಕರರ ಪ್ರತಿಭಟನೆಗೆ ಕಾರಣವಾಗಿದೆ. ಕಾರ್ಮಿಕ ಸಂಘಟನೆಯೊಳಗಿರದ ನೌಕರರ ಸಂಘಟನೆಯಾದ ಒಬ್ಬರೆ ಅಲ್ಲ, ಜೊತೆಯಾಗಿ ಎಂಬ ಹೆಸರಲ್ಲಿ ಸೋಮವಾರ ಎಲ್ಲಾ ಸಾರಿಗೆ ಬಸ್ ಕಾರ್ಮಿಕರೂ ಕೆಲಸಕ್ಕೆ ಹಾಜರಾಗಿ ಹೀಗೊಂದು ವಿನೂತನ ಪ್ರತಿಭಟನೆ ನಡೆಸಿದರು.
ಹೆಚ್ಚಿನ ಹಾಜರಾತಿಯ ಹೊರತಾಗಿಯೂ ಸೇವೆಗಳನ್ನು ನಡೆಸಲು ಸಿಬ್ಬಂದಿ ಸಿದ್ಧರಿಲ್ಲದ ಕಾರಣ ಈ ಕ್ರಮವು ಸಾರ್ವಜನಿಕರಿಗೆ ಸವಾಲಾಗಿದೆ ಎಂದು ಪ್ರಯಾಣಿಕರು ಪ್ರತಿಕ್ರಿಯಿಸಿದ್ದಾರೆ. ಸರ್ಕಾರಿ ವ್ಯವಸ್ಥೆ ಇಂತಹ ನಿಲುವು ತೆಗೆದುಕೊಳ್ಳುವುದು ಸರಿಯಲ್ಲ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
ಇದೇ ವೇಳೆ ಹರತಾಳವು ಕೇರಳದ ಮೇಲೆ ಹೆಚ್ಚು ಪರಿಣಾಮ ಬೀರಿಲ್ಲ ಎಂದು ವರದಿಯಾಗಿದೆ. ಎಲ್ಲಾ ಖಾಸಗಿ ವಾಹನಗಳು ರಸ್ತೆಗಿಳಿದಿವೆ. ಅನೇಕ ಕಡೆಗಳಲ್ಲಿ ಮಾರುಕಟ್ಟೆಗಳು ತೆರೆದಿದ್ದವು. ಅಂತಾರಾಜ್ಯ ಸರಕುಗಳ ತಡೆರಹಿತ ಸಂಚಾರ ಜನರು ಹರತಾಳವನ್ನು ತಿರಸ್ಕರಿಸಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಸಾರ್ವಜನಿಕರು ಕೂಡ ಹೇಳಿದ್ದಾರೆ.