ಮುಂಬೈ: ಶಿವಸೇನಾ ತನ್ನ ಮುಖವಾಣಿ ಸಾಮ್ನಾ ಪತ್ರಿಕೆಯಲ್ಲಿ ಜಾವೇದ್ ಅಖ್ತರ್ ಹೇಳಿಕೆಗೆ ಕಿಡಿ ಕಾರಿದ್ದರು. ಆರೆಸ್ಸೆಸ್ ಅನ್ನು ತಾಲಿಬಾನ್ ಮನೋಧರ್ಮಕ್ಕೆ ಹೋಲಿಸುವವರು ಮೊದಲು ಆ ವಿಚಾರವನ್ನು ಸ್ಥೂಲವಾಗಿ ಪರಾಮರ್ಶಿಸಬೇಕು ಎಂದು ಶಿವಸೇನಾ ಆಕ್ರೋಶ ವ್ಯಕ್ತಪಡಿಸಿದೆ.
ಇತ್ತೀಚಿಗೆ ಪತ್ರಿಕಾ ಸಂದರ್ಶನವೊಂದರಲ್ಲಿ ಬಾಲಿವುಡ್ ಗೀತ ರಚನೆಕಾರ, ಸಾಹಿತಿ ಜಾವೆದ್ ಅಖ್ತರ್ ಅವರು ಆರೆಸ್ಸೆಸ್, ವಿಶ್ವ ಹಿಂದೂ ಪರಿಷದ್ ಮತ್ತು ಭಜರಂಗದಳವನ್ನು ತಾಲಿಬಾನಿಗೆ ಹೋಲಿಸಿ ಮಾತನಾಡಿದ್ದರು. ತಾಲಿಬಾನ್ ಮನೋಧರ್ಮ ಅತ್ಯಂತ ಅಪಾಯಕಾರಿಯಾದದ್ದು ಹಾಗೆಯೇ ಆರೆಸ್ಸೆಸ್, ವಿಎಚ್ ಪಿ ಮತ್ತು ಭಜರಂಗದಳ ಎಂದು ಅವರು ಹೇಳಿಕೆ ನೀಡಿದ್ದರು.
ಜಾವೆದ್ ಅಖ್ತರ್ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಜಾವೆದ್ ಅಖ್ತರ್ ಹಾಗೂ ಅವರ ಕುಟುಂಬಸ್ಥರು ಮಾಡುವ ಸಿನಿಮಾಗಳನ್ನು ಪ್ರದರ್ಶಿಸದಂತೆ ನಿರ್ಬಂಧ ಹೇರುವುದಾಗಿ ಹಲವು ಬಲಪಂಥೀಯ ನಾಯಕರು ಎಚ್ಚರಿಕೆ ನೀಡಿದ್ದರು.