ಕಾಸರಗೋಡು: ಕಾಸರಗೋಡು ಜಿಲ್ಲೆಗೆ ಅಗತ್ಯ ಪ್ರಮಾಣದಲ್ಲಿ ಲಸಿಕೆ ಲಭ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ-ಪಂಗಡ ವಲಯಗಳಲ್ಲಿ ಮತ್ತು ವಿಶೇಷಚೇತನರ ವಲಯಗಳಲ್ಲಿ ವಾಕ್ಸಿನೇಷನ್ ತುರ್ತಾಗಿ ಪೂರ್ತಿಗೊಳಿಸಲು ನಿರ್ಧಾರಿಸಲಾಗಿದೆ. 2 ವಾರಗಳ ಅವಧಿಯಲ್ಲಿ ಇದರ ಪೂರ್ತೀಕರಣ ನಡೆಸಲಾಗುವುದು ಎಂದು ತಿಳಿಸಲಾಗಿದೆ.
ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಅಧ್ಯಕ್ಷತೆ ವಹಿಸಿದ್ದರು.
ಯಾವುದಾದರೂ ಕಾಲನಿಗಳಲ್ಲಿ ವಾಕ್ಸಿನೇಷನ್ ನಡೆಸುವ ವೇಳೆ ಪೆÇಲೀಸ್ ಸಹಾಯ ಅಗತ್ಯವಿದ್ದಲ್ಲಿ ಜಿಲ್ಲಾ ವೈದ್ಯಾಧಿಕಾರಿ ಅವರು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಅವರನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.
ಜಿಲ್ಲೆಯ ಸಿ.ಎಫ್.ಎಲ್.ಟಿ.ಸಿ.ಗಳಲ್ಲಿ ಮತ್ತು ಇತರ ಆರೋಗ್ಯ ಕೇಂದ್ರಗಳಲ್ಲಿ ದಾಖಲಾಗಿರುವ ಕೋವಿಡ್ ಪಾಸಿಟಿವ್ ರೋಗಿಗಳಲ್ಲಿ, ನೆಗೆಟಿವ್ ಆಗಿ ಬಿಡುಗಡೆಗೊಂಡಿವರ ಮಂದಿಯನ್ನು ಸಮಾಜ ನೀತಿ ಇಲಾಖೆಯ ವ್ಯಾಪ್ತಿಯ ಹೋಂ ಗಳಲ್ಲಿ ತಂಗಲು ಸೌಲಭ್ಯ ಒದಗಿಸಲಾಗುವುದು. ಈ ನಿಟ್ಟಿನಲ್ಲಿ ಇಂಥಾ ವ್ಯಕ್ತಿಗಳ ಮಾಹಿತಿಯನ್ನು ಜಿಲ್ಲಾ ವೈದ್ಯಾಧಿಕಾರಿ ಅವರು ಜಿಲ್ಲಾ ಸಮಾಜ ನೀತಿ ಅಧಿಕಾರಿಗೆ ಹಸ್ತಾಂತರಿಸುವಂತೆ ಜಿಲ್ಲಾಧಿಕಾರಿ ಆದೇಶಿಸಿದರು.
ಇತರ ರಾಜ್ಯಗಳ ಕಾರ್ಮಿಕ ಕಲ್ಯಾಣ ಸಂಬಂಧ ಪಿ.ಎಂ.ಕೇರ್ ಫಂಡ್ ನಿಂದ ನಿಧಿ ಮಂಜೂರಾತಿಗಿರುವ ಬಿಲ್ ಗಳನ್ನು ಹಾಜರುಪಡಿಸಲು ಬಾಕಿಯಿರುವವರು ತಕ್ಷಣ ಸಲ್ಲಿಸುವಂತೆ ತಿಳಿಸಲಾಗಿದೆ. ಕೋವಿಡ್ ಸಂಬಂಧ ಹೆತ್ತವರನ್ನು ಕಳೆದುಕೊಂಡಿರುವ ಮಕ್ಕಳಿಗೆ ಆರ್ಥಿಕ ಸಹಾಯ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾ ಶಿಶು ಸಂರಕ್ಷಣೆ ಅಧಿಕಾರಿ ಅವರು ವರದಿ ಸಲ್ಲಿಕೆ ಬಾಕಿಯಿರುವ ಪ್ರಕರಣಗಳಲ್ಲಿ ತಕ್ಷಣ ವರದಿ ಸಲ್ಲಿಸುವಂತೆ ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದರು.