ಕೊಚ್ಚಿ: ಹವಾಮಾನ ವೈಪರೀತ್ಯದಿಂದಾಗಿ ವಿಮಾನ ಲ್ಯಾಂಡಿಂಗ್ ನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಕಣ್ಣೂರು ಮತ್ತು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಇಳಿಯಬೇಕಿದ್ದ ವಿಮಾನಗಳನ್ನು ಹವಾಮಾನದ ಅಸಮರ್ಪಕತೆಯಿಂದ ಕೊಚ್ಚಿ ನೆಡುಂಬಶೇರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು.
ದುಬೈನಿಂದ ಕಣ್ಣೂರಿಗೆ ಪ್ರಯಾಣಿಕರನ್ನು ಹೊತ್ತುತಂದ ಏರ್ ಇಂಡಿಯಾ ವಿಮಾನ ಮತ್ತು ಮಂಗಳೂರು ನಿಲ್ದಾಣದಲ್ಲಿ ಇಳಿಯಬೇಕಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನಗಳನ್ನು ಕೊಚ್ಚಿಯಲ್ಲಿ ಇಳಿಸಲಾಯಿತು. ಪ್ರಯಾಣಿಕರು ವಿಮಾನದಲ್ಲಿಯೇ ಇದ್ದಾರೆಂದು ತಿಳಿದುಬಂದಿದೆ.
ಹವಾಮಾನವು ಅನುಕೂಲಕರವಾಗಿದ್ದರೆ ವಿಮಾನಗಳು ತಮ್ಮ ವಿಮಾನ ನಿಲ್ದಾಣಗಳಿಗೆ ಹಿಂತಿರುಗುತ್ತವೆ. ಏರ್ ಇಂಡಿಯಾ ಅಧಿಕಾರಿಗಳು ತಾವು ಶೀಘ್ರವೇ ಹಿಂತಿರುಗುವ ಭರವಸೆ ಹೊಂದಿದ್ದೇವೆ ಎಂದು ಹೇಳಿರುವರು.