ಶ್ರೀನಗರ : ಹುರಿಯತ್ ಮುಖಂಡ ಸೈಯದ್ ಅಲಿ ಶಾ ಗಿಲಾನಿ ನಿಧನರಾಗಿದ್ದಾರೆ.ಗಿಲಾನಿ ಜಮ್ಮು ಕಾಶ್ಮೀರದಲ್ಲಿ ಭಾರತದ ಪ್ರತ್ಯೇಕತಾ ಹೋರಾಟ ನಡೆಸುತ್ತಿದ್ದರು.
ಸೈಯದ್ ಗಿಲಾನಿ ಮೂರು ದಶಕಗಳಿಗೂ ಹೆಚ್ಚಿನ ಕಾಲ ಜಮ್ಮು ಮತ್ತು ಕಾಶ್ಮೀರ ಪ್ರತ್ಯೇಕ ರಾಜ್ಯವಾಗಬೇಕು ಎಂದು ಹೋರಾಟ ನಡೆಸಿದ್ದರು, ಬಳಿಕ ತಮ್ಮ ಸ್ಥಾನಕ್ಕೆ ಕಳೆದ ವರ್ಷವಷ್ಟೇ ರಾಜೀನಾಮೆ ನೀಡಿದ್ದರು.
ನೂರಾರು ಕೋಟಿ ರು ಒಡೆಯ ಗಿಲಾನಿ ಅಲ್ಲದೆ ಪುತ್ರರಾದ ನಾಸೀಮ್, ನಯೀಮ್, ಪುತ್ರಿಯರಾದ ಅನಿಷಾ, ಫಾರ್ ಹಾತ್ ಸೇರಿ ಆರು ಜನರ ಮೇಲೆ ಎನ್‌ಐಎ ಅಧಿಕಾರಿಗಳು ಕಣ್ಣಿಟ್ಟಿದ್ದು, ಅಕ್ರಮ ಆಸ್ತಿ ಗಳಿಕೆ, ಪಾಕಿಸ್ತಾನದಿಂದ ಹಣ ಪಡೆದು, ಕಣಿವೆ ರಾಜ್ಯದಲ್ಲಿ ವಿಧ್ವಂಸಕ ಕೃತ್ಯಕ್ಕೆ ಬಳಕೆ ಮುಂತಾದ ಆರೋಪಗಳ ಕುರಿತ ತನಿಖೆ ಜಾರಿಯಲ್ಲಿದೆ.
ಜಮ್ಮು ಮತ್ತು ಕಾಶ್ಮೀರ ಒಂದು ವಿವಾದಿತ ಪ್ರದೇಶ ಮತ್ತು ಅದರ ಮೇಲೆ ಭಾರತದ ನಿಯಂತ್ರಣ ಸಮರ್ಥನೀಯವಲ್ಲ. ಅದು ಕಾಶ್ಮೀರವು ವಿಭಜನೆಯ ಮುಗಿಯದ ಕಾರ್ಯಸೂಚಿ ಎಂದು ಮತ್ತು ಜಮ್ಮು ಹಾಗೂ ಕಾಶ್ಮೀರದ ಜನರ ಆಕಾಂಕ್ಷೆಗಳ ಪ್ರಕಾರ ಅದನ್ನು ಬಗೆಹರಿಸಬೇಕು ಎಂಬ ಪಾಕಿಸ್ತಾನದ ಹಕ್ಕನ್ನು ಬೆಂಬಲಿಸುತ್ತದೆ ಎಂದು ಹುರಿಯತ್ ಪ್ರತಿಪಾದಿಸುತ್ತಾ ಬಂದಿತ್ತು.ವೈಯಕ್ತಿಕ ಹಿತಾಸಕ್ತಿಗಾಗಿ ಕಣಿವೆ ರಾಜ್ಯದ ಯುವ ಜನಾಂಗವನ್ನು ದಿಕ್ಕು ತಪ್ಪಿಸಲಾಗಿದೆ ಎಂಬ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
ಸೋಪೋರ್ ಕ್ಷೇತ್ರದಿಂದ ಮೂರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದ ಗಿಲಾನಿಗೆ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ ಎಂಬ ಸುದ್ದಿಯಿದೆ. 91 ವರ್ಷ ವಯಸ್ಸಿನ ಗಿಲಾನಿ ಇತ್ತೀಚೆಗೆ ಅಸ್ವಸ್ಥರಾಗಿದ್ದರು . ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.