ಕಾಸರಗೋಡು; ಎಂಟನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆಗೈದ ಪ್ರಕರಣದಲ್ಲಿ ಆರೋಪಿಯಾಗಿರುವ ಶಿಕ್ಷಕನನ್ನು ಬಂಧಿಸಲಾಗಿದೆ. ಅಡೂರು ನಿವಾಸಿಯಾದ ಉಸ್ಮಾನ್ ನನ್ನು ಮುಂಬೈನ ಅಡಗುತಾಣದಿಂದ ಪೋಲೀಸ್ ತಂಡ ಬಂಧಿಸಿದೆ.
ದೇಳಿಯ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದುತ್ತಿದ್ದ ಬಾಲಕಿ ಈ ತಿಂಗಳ 8 ರಂದು ತನ್ನ ಮನೆಯೊಳಗೆ ಶವವಾಗಿ ಪತ್ತೆಯಾಗಿದ್ದಳು. ಆತ್ಮಹತ್ಯೆಯ ಹಿಂದೆ ಉಸ್ಮಾನ್ ನ ಮಾನಸಿಕ ಕಿರುಕುಳ ಕಾರಣ ಎಂದು ಬಾಲಕಿಯ ತಂದೆ ಆರೋಪಿಸಿದ್ದರು. ಅಪ್ರಾಪ್ತ ಬಾಲಕಿಯೊಂದಿಗೆ ಶಿಕ್ಷಕರು ಅಶ್ಲೀಲ ಚಾಟ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ತಂದೆ ಮೊಬೈಲ್ ಪೋನ್ ಪರಿಶೀಲಿಸಿ ಶಾಲೆಯ ಪ್ರಾಂಶುಪಾಲರಿಗೆ ಮಾಹಿತಿ ನೀಡಿದರು. ಶಿಕ್ಷಕ ವಿದ್ಯಾರ್ಥಿನಿಗೆ ಕರೆ ಮಾಡಿ ಅಂದು ರಾತ್ರಿ ಬೆದರಿಕೆ ಹಾಕಿದ್ದನು ಎಂಬುದು ವೇದ್ಯವಾಗಿತ್ತು. ಮಾನಸಿಕವಾಗಿ ಅಸ್ವಸ್ಥಳಾದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಳು ಎಂದು ಕುಟುಂಬದವರು ಆರೋಪಿಸಿದ್ದಾರೆ. ಪೋಲೀಸರೂ ಬಾಲಕಿಯ ಕುಟುಂಬ ಮೂಲ ಆರೋಪಿಸಿರುವ ಮಾಹಿತಿಯನ್ನು ದೃಢಪಡಿಸಿ ತನಿಖೆಗೆ ಚಾಲನೆ ನೀಡಿದ್ದರು.