ತಿರುವನಂತಪುರಂ: ಕೆಪಿ ಅನಿಲ್ ಕುಮಾರ್ ಮತ್ತು ಪಿಎಸ್ ಪ್ರಶಾಂತ್ ರ ಬಳಿಕ ಮತ್ತೆ ಮೂವರು ನಾಯಕರು ಕಾಂಗ್ರೆಸ್ ತೊರೆಯುತ್ತಿದ್ದಾರೆ. ಈ ನಾಯಕರು ಡಿಸಿಸಿ ಮರುಸಂಘಟನೆಯಲ್ಲಿ ಅತೃಪ್ತರಾಗಿದ್ದು, ಇವರಲ್ಲಿ ಒಬ್ಬರು ಸಿಪಿಎಂಗೆ ಮತ್ತು ಇನ್ನಿಬ್ಬರು ಎನ್ ಸಿಪಿಗೆ ಸೇರ್ಪಡೆಗೊಳ್ಳುವರು ಎನ್ನಲಾಗಿದೆ.
ಆಲಪ್ಪುಳ ಜಿಲ್ಲೆಯ ಹಿರಿಯ ಸಮುದಾಯದ ನಾಯಕ, ಕೊಲ್ಲಂ ಜಿಲ್ಲೆಯ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ತಿರುವನಂತಪುರದ ಕೆಪಿಸಿಸಿ ಕಾರ್ಯಕಾರಿ ಸಮಿತಿಯ ಸದಸ್ಯರು ಪಕ್ಷವನ್ನು ತೊರೆಯುತ್ತಿದ್ದಾರೆ. ಅವರಲ್ಲಿ, ಅಲಪುಳದ ಪ್ರಮುಖ ಸಮುದಾಯದ ನಾಯಕ ಮಾಜಿ ಸಂಸದರಾಗಿದ್ದರು.
ಈ ಹಿಂದೆ ಅವರನ್ನು ಡಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಲಾಗಿತ್ತು. ಆದರೆ ಹುದ್ದೆ ನೀಡದೆ ವಿಶ್ವಾಸ ದ್ರೋಹವೆಸಗಿತೆಂದು ಪಕ್ಷವನ್ನು ತೊರೆಯಲು ಕಾರಣ ಎನ್ನಲಾಗಿದೆ. ಪಕ್ಷದ ಹೊಸ ನಾಯಕತ್ವವು ಅವರ ಮಾತನ್ನು ಕೇಳುತ್ತಿಲ್ಲ ಎಂದು ಅವರು ದೂರಿರುವರು. ಅವರು ಸಮುದಾಯದ ನಾಯಕರೂ ಹೌದು.
ಈ ಸಮುದಾಯದ ಕೆಲವು ರಾಜಕೀಯ ಸ್ಥಾನಗಳೂ ಪ್ರಸ್ತುತ ನಿರ್ಧಾರಕ್ಕೆ ಕಾರಣವಾಗಿವೆ ಎಂದು ಸೂಚನೆಗಳಿವೆ. ಕೊಲ್ಲಂನ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯನ್ನು ಮರುಸಂಘಟನೆಗೆ ಪರಿಗಣಿಸದ ನಂತರ ಪಕ್ಷವನ್ನು ತೊರೆಯುವ ನಿರ್ಧಾರ ಪ್ರಕಟಿಸಲಾಗಿದೆ.
ಅವರು ಈ ಹಿಂದೆ ಜಿಲ್ಲೆಯ ಪ್ರಮುಖ ಗುಂಪಿನ ನಾಯಕರಾಗಿದ್ದರು ಮತ್ತು ಡಿಸಿಸಿ ಅಧ್ಯಕ್ಷರನ್ನಾಗಿ ಮಾಡಬೇಕೆಂದು ಒತ್ತಾಯಗಳಿತ್ತು. ಆದರೆ ಅದಕ್ಕೆ ಸಾಕಷ್ಟು ಪ್ರಾಮುಖ್ಯತೆ ಸಿಗಲಿಲ್ಲ. ತಿರುವನಂತಪುರದ ಕೆಪಿಸಿಸಿ ಸದಸ್ಯರಿಗೆ ಯಾವುದೇ ಸ್ಥಾನಮಾನ ಸಿಗದಿರುವುದೇ ಪಕ್ಷವನ್ನು ತೊರೆಯಲು ಕಾರಣ.
ಆದರೆ ಕಾಂಗ್ರೆಸ್ ನಾಯಕರು ಈ ನಾಯಕರು ಕೇವಲ ಶ್ರೇಣಿಯಿಲ್ಲದ ಸ್ವಯಂ ನಿರ್ಮಿತ ನಾಯಕರು ಎಂದು ಹೇಳುತ್ತಾರೆ. ಆದ್ದರಿಂದ, ಹೋಗುವವರನ್ನು ನಿಲ್ಲಿಸಬಾರದು ಎಂದು ನಾಯಕತ್ವ ಸ್ಪಷ್ಟಪಡಿಸುತ್ತದೆ. ಅಧಿಕಾರದತ್ತ ಹೋರಾಟದಲ್ಲಿ ಈ ನಾಯಕರು ಪ್ರಾಮಾಣಿಕತೆಯನ್ನು ಕಾಣುವುದಿಲ್ಲ ಎಂದು ಅವರು ಹೇಳುತ್ತಾರೆ.
ಆದಾಗ್ಯೂ, ಒಂದು ಭಾಗದ ನಾಯಕರು ಪಕ್ಷವನ್ನು ತೊರೆಯುವುದನ್ನು ತಡೆಯಲು ನಾಯಕತ್ವ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.