ಮುಳ್ಳೇರಿಯ: ಘನ ತ್ಯಾಜ್ಯ ಸಂಸ್ಕರಣೆಯಲ್ಲಿ ಅತ್ಯುತ್ತಮ ನಿರ್ವಹಣೆ ನಡೆಸಿದ ಸ್ಥಳೀಯಾಡಳಿತ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ನೀಡುವ ನವಕೇರಳ ಪ್ರಶಸ್ತಿಯನ್ನು ಬೇಡಡ್ಕ ಗ್ರಾಮ ಪಂಚಾಯತ್ ಗೆ ಪ್ರದಾನ ಮಾಡಲಾಯಿತು.
ಶಾಸಕಿ ಕೆ.ಕೆ.ಶೈಲಜಾ ಪ್ರಶಸ್ತಿ ಹಸ್ತಾಂತರಿಸಿದರು. ಮುನ್ನಾಡಿನಲ್ಲಿ ನಿರ್ಮಿಸಲಾದ ಟೇಕ್ ಎ ಬ್ರೇಕ್ ಹಾದಿಬದಿ ವಿಶ್ರಾಂತಿ ಕೇಂದ್ರವನ್ನೂ ಅವರು ಉದ್ಘಾಟಿಸಿದರು. ಪ್ಲಾಸ್ಟಿಕ್ ಸಂಸ್ಕರಣ ಘಟಕದಿಂದ ತ್ಯಾಜ್ಯವನ್ನು ವಿಂಗಡಿಸಿ, ಪುಡಿಮಾಡಿ ಡಾಮರೀಕರಣಕ್ಕೆ ನೀಡಿದ ನಿಟ್ಟಿನಲ್ಲಿ ಕ್ಲೀನ್ ಕೇರಳ ಕಂಪನಿ ನೀಡಿರುವ 1.81 ಲಕ್ಷ ರೂ.ನ ಚೆಕ್ ನ್ನು ಹರಿತ ಕ್ರಿಯಾ ಸೇನೆಗೆ ಹಸ್ತಾಂತರಿಸಲಾಯಿತು. ಗ್ರಾಮ ಪಂಚಾಯತಿಯ ಅಭಿವೃದ್ಧಿಗೆ ಸಹಕರಿಸಿದ ಆರೋಗ್ಯ ವಿಭಾಗ, ಹರಿತ ಕ್ರಿಯಾ ಸೇನೆ, ಜಿಲ್ಲಾ ಶುಚಿತ್ವ ಮಿಷನ್, ಜಿಲ್ಲಾ ಹರಿತ ಸೇನಾ ಮಿಷನ್, ಕ್ಲೀನ್ ಕೇರಳ ಕಂಪನಿ, ಯೋಜನೆಯ ನಿರ್ವಹಣೆ ಸಿಬ್ಬಂದಿ, ವಿಶ್ರಾಂತಿ ಕೇಂದ್ರ ನಿರ್ಮಾಣದ ಗುತ್ತಿಗೆದಾರ ಮೊದಲಾದವರನ್ನು ಶಾಸಕ ನ್ಯಾಯವಾದಿ ಸಿ.ಎಚ್.ಕುಂಞಂಬು ಅಭಿನಂದಿಸಿದರು. ಅನೇಕ ಗಣ್ಯರು ಉಪಸ್ಥಿತರಿದ್ದರು.