ರಾಷ್ಟ್ರದ ಸಂವಿಧಾನದಲ್ಲಿ ಮೂಲಭೂತ ಹಕ್ಕಿಗೆ ಸಂಬಂಧಿಸಿ ಮಠದ ಪೂರ್ವ ಯತಿಗಳಾದ ಬ್ರಹ್ಮ್ಯೆಖ್ಯ ಶ್ರೀಶ್ರೀ ಕೇಶವಾನಂದ ಭಾರತೀ ಶ್ರೀಗಳು ಹೂಡಿದ ಖಟ್ಲೆಗೆ ಸಂಬಂಧಿಸಿ ದಶಗಳ ಹಿಂದೆ ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿನ ಅನುಸಾರ ರಾಷ್ಟ್ರದ ಸಂವಿಧಾನದಲ್ಲಿ ಶ್ರೀ ಎಡನೀರು ಮಠ ಮಹತ್ತರ ಸ್ಥಾನ ಪಡೆದಿದ್ದು, ರಾಷ್ಟ್ರಾದ್ಯಂತ ಎಲ್ಲಾ ನ್ಯಾಯಾಂಗ ವ್ಯವಸ್ಥೆಗೆ ಸದಾ ಪೂಜನೀಯ ಕ್ಷೇತ್ರ ಶ್ರೀಮಠವಾಗಿದೆ.
ಎಡನೀರು ಮಠಕ್ಕೆ ಉತ್ತರಾಖಂಡ್ ನ ಮುಖ್ಯ ನ್ಯಾಯಮೂರ್ತಿಗಳ ಭೇಟಿ
0
ಸೆಪ್ಟೆಂಬರ್ 02, 2021
ಕಾಸರಗೋಡು: ಶ್ರೀಮದ್ ಎಡನೀರು ಮಠಾಧೀಶ ಶ್ರೀಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳ ಪ್ರಥಮ ಚಾತುರ್ಮಾಸ್ಯ ವ್ರತಾಚರಣೆ ಶ್ರೀಮಠದಲ್ಲಿ ನಡೆಯುತ್ತಿದ್ದು, ಬುಧವಾರ ಸಂಜೆ ಉತ್ತರಾಖಂಡ ಹ್ಯೆಕೋರ್ಟ್ ಮುಖ್ಯ ನ್ಯಾಯಾಧೀಶ ರಾಘವೇಂದ್ರ ಸಿಂಗ್ ಚೌಹಾನ್ ಭೇಟಿ ನೀಡಿ ಅನುಗ್ರಹ ಪಡೆದರು.
Tags