ತಿರುವನಂತಪುರಂ: ಟೋಕಿಯೊ ಒಲಿಂಪಿಕ್ಸ್‍ನಲ್ಲಿ ಈಜು ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಕೇರಳೀಯ ಕ್ರೀಡಾಪಟು ಸಾಜನ್ ಪ್ರಕಾಶನ್ ಅವರಿಗೆ ಕೇರಳ ಪೋಲೀಸ್ ಇಲಾಖೆಯ ಸಹಾಯಕ ಕಮಾಂಡೆಂಟ್ ಹುದ್ದೆ ನೀಡಲಾಗಿದೆ.
ತನ್ನನ್ನು ಬೆಂಬಲಿಸಿದ್ದಕ್ಕಾಗಿ ಕೇರಳ ಪೋಲೀಸರಿಗೆ ಸಾಜನ್ ಅಭಿನಂದನೆ ಸಲ್ಲಿಸಿರುವರು. ಸಾಮಾಜಿಕ ಮಾಧ್ಯಮದ ಮೂಲಕ ಕೇರಳ ಪೋಲೀಸರಿಗೆ ಸಾಜನ್ ಧನ್ಯವಾದ ಅರ್ಪಿಸಿದರು. ಸಾಜನ್ ಒಲಿಂಪಿಕ್ಸ್‍ನಲ್ಲಿ 200 ಮೀಟರ್ ಈಜಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
ಸಾಜನ್ ಒಲಿಂಪಿಕ್ಸ್‍ಗೆ ನೇರವಾಗಿ ಅರ್ಹತೆ ಪಡೆದ ಮೊದಲ ಭಾರತೀಯ ಈಜುಗಾರ. ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದ ಸಾಜನ್ ಗೆ ಕಳೆದ ತಿಂಗಳು ಆಗಸ್ಟ್ 16 ರಂದು ಕೇರಳ ಪೋಲೀಸರು ಭವ್ಯ ಸ್ವಾಗತ ನೀಡಿದ್ದರು. ಸಜನ್ ಈ ಹಿಂದೆ ಸೇನೆಯಲ್ಲಿ ಸಶಸ್ತ್ರ ಪೋಲೀಸ್ ಇನ್ಸ್‍ಪೆಕ್ಟರ್ ಆಗಿದ್ದರು.